ಬೆಂಗಳೂರು : ಸ್ಯಾಂಡಲ್‍ವುಡ್ ನಟ ವಿನಾಯಕ ಜೋಶಿ, ತಮ್ಮ ಬಹು ಕಾಲದ ಗೆಳತಿಯೊಂದಿಗೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಗಿರಿಯ ಮಂಜುನಾಥ ದೇವಾಲಯದಲ್ಲಿ ಕೋವಿಡ್ ನಿಯಮದಂತೆ ಸರಳವಾಗಿ ಮದುವೆ ಸಮಾರಂಭ ನೆರವೇರುತ್ತಿದ್ದು, ವಿನಾಯಕ್ ಜೋಶಿ ಅವರು ತಮ್ಮ ಬಾಲ್ಯದ ಗೆಳತಿ ವರ್ಷಾ ಅವರನ್ನು ವರಿಸಿದ್ದಾರೆ. ಮದುವೆ ಸಮಾರಂಭದಲ್ಲಿ 15 ರಿಂದ 55 ವರ್ಷದ ಒಳಗಿನವರಿಗೆ ಮಾತ್ರ ಭಾಗವಹಿಸಲು ಅವಕಾಶವಿರುವುದರಿಂದ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಸ್ನೇಹಿತರಿಗೆ ಕಾರ್ಯಕ್ರಮ ಇಟ್ಟುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಖ್ಯಾತಿ ಪಡೆದಿರುವ ವರ್ಷಾ ಬೆಳವಾಡಿ ಅವರು ಈಗಾ ಬ್ಯಾಡ್ಮಿಂನ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದ ಗೆಳೆಯರಾಗಿದ್ದ ಇಬ್ಬರೂ ಬೇರೆಡೆ ವಾಸಿಸುತ್ತಿದ್ದರು. ಬಳಿಕ ಕಳೆದ 20 ವರ್ಷಗಳ ಹಿಂದೆ ಭೇಟಿಯಾದ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರ ಪ್ರೀತಿಯನ್ನು ಒಪ್ಪಿದ ಪೋಷಕರು ಮದುವೆಗೆ ಅನುಮತಿ ನೀಡಿದರು. ನಟ ವಿನಾಯಕ್ ಜೋಶಿ ಅವರು ಸುಮಾರು 70ಕ್ಕೂ ಸಿನಿಮಾಗಳಲ್ಲಿ ನಟಿಸಿದ್ದಾರೆ.










