ಚಲಿಸುತ್ತಿದ್ದ ಬೈಕ್‍ನಿಂದ ಕೆಳಗೆ ಬಿದ್ದು ಶಿಕ್ಷಕ ಸ್ಥಳದಲ್ಲೇ ಸಾವು…

154
firstsuddi

ಚಾಮರಾಜನಗರ : ಚಲಿಸುತ್ತಿದ್ದ ಬೈಕಿನಿಂದ ಕೆಳಗೆ ಬಿದ್ದು ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಳ್ಳಗಾಲದಲ್ಲಿ ನಡೆದಿದೆ. ಮಧುವನಹಳ್ಳಿ ಗ್ರಾಮದ ನಿವಾಸಿ ಮಹದೇವಶೆಟ್ಟಿ(57) ಮೃತ ಶಿಕ್ಷಕ ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕ ತಮ್ಮ ಬೈಕಿನಲ್ಲಿ ಕೊಳ್ಳೆಗಾಲ ಮಾರ್ಗವಾಗಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕಿನಿಂದ ಕೆಳಗೆ ಬಿದ್ದಿದ್ದು, ಕೆಳಗೆ ಬಿದ್ದ ರಭಸಕ್ಕೆ ಮಹದೇವಶೆಟ್ಟಿ ಅವರ ತಲೆಗೆ ಗಂಭೀರವಾಗಿ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಕುರಿತು ಕೊಳ್ಳೆಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.