ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ
ಹೊಸಪೇಟೆ : ರಾಜ್ಯದಾದ್ಯಂತ ಸೆ.28ರಂದು ನಡೆಯುವ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ನಡೆಯುವ ಹೋರಾಟದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯನ್ನು ಕಾಪಾಡಿಕೊಂಡು ಹೋಗಿ ಎಂದು ಡಿ.ವೈ.ಎಸ್.ಪಿ. ಹರೀಶ್ ಸಂಘಟಕರಿಗೆ ಕರೆ ನೀಡಿದರು.
ಅವರು ಮರಿಯಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ರೈತ ದಲಿತ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಾಜ್ಯದಾದ್ಯಂತ ನಡೆಯುವ ಹೋರಾಟದಲ್ಲಿ ಮರಿಯಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಹೋರಾಟದ ರೂಪುರೇಷೆಗಳನ್ನು ಪೊಲೀಸರ ಗಮನಕ್ಕೆ ತಂದರೆ ತಮಗೆ ಅಗತ್ಯ ರಕ್ಷಣೆ ನೀಡಲಾಗುವುದು. ಸಂಘಟಕರು ಚದುರಿ ಹೋಗದೇ ಒಂದೆಡೆಯಿಂದ ಪಾಲ್ಗೊಳ್ಳಿ, ಕೊರೋನಾ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆಯೂ ಇದೆ. ಸಂಘಟಕರು ಯಾವುದೇ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಮಾಡದೇ ಗಲಭೆಗಳಿಗೆ ಅವಕಾಶ ಮಾಡಿಕೊಡದೇ ಶಾಂತಿಯುವಾಗಿ ಹೋರಾಟದಲ್ಲಿ ಪಾಲ್ಗೊಳ್ಳಿ. ಒಂದು ವೇಳೆ ಕಾನೂನಿನ ಚೌಕಟ್ಟು ಮೀರಿ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡಿದರೆ ಅಂತವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಡೂರು ಸಿಪಿಐ ಎಂ.ಉಮೇಶ್, ಪಿ.ಎಸ್.ಐ. ಶಿವಕುಮಾರ್, ಪಿ.ಎಸ್.ಐ. ಬಿ.ಮೀನಾಕ್ಷಿ(ಅಪರಾಧ ವಿಭಾಗ), ಕರ್ನಾಟಕ ರಾಜ್ಯ ರೈತ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಗೋಣೆಪ್ಪ, ಜಿಲ್ಲಾ ಉಪಾಧ್ಯಕ್ಷ ಕುಮಾರಸ್ವಾಮಿ, ಮರಿಯಮ್ಮನಹಳ್ಳಿ ಹೋಬಳಿ ಅಧ್ಯಕ್ಷ ಈರಗಾರ ದುರ್ಗೇಶ, ಕರ್ನಾಟಕ ರಾಜ್ಯ ರೈತಸಂಘ, ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ಕೊಟಗಿ ಲೋಕೇಶ, ಕರ್ನಾಟಕ ರಾಜ್ಯ ರೈತಸಂಘ (ಹುಚ್ಚವನಹಳ್ಳಿ ಮಂಜುನಾಥ ಬಣ) ಹೊಸಪೇಟೆ ತಾಲೂಕು ಅಧ್ಯಕ್ಷ ಎಂ.ಪ್ರಕಾಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಲಕ್ಷ್ಮಣ, ಮುಖಂಡರಾದ ಎಲ್ ಜಗನ್ನಾಥ, ಹೆಚ್.ನಾಗಪ್ಪ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಹೋಬಳಿ ಅಧ್ಯಕ್ಷ ರಮೇಶ್ ಈಡಿಗರ, ಹೋಬಳಿ ಗೌರವಾಧ್ಯಕ್ಷ ಡಿ. ಭೀಮಣ್ಣ, ಪ್ರಧಾನ ಕಾರ್ಯದರ್ಶಿ ಎ.ರಾಜಶೇಖರ್, ಮರಿಯಮ್ಮನಹಳ್ಳಿ ನಗರ ಘಟಕದ ಕಾರ್ಯದರ್ಶಿ ಶಮೀರ್, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೆಗೌಡ ಬಣ)ಹೋಬಳಿ ಅಧ್ಯಕ್ಷ ಭರತ್, ಉಪಾಧ್ಯಕ್ಷ ಎಸ್.ಎಂ. ವಿಶ್ವಾರಾಧ್ಯ, ಸಂಘಟನಾ ಕಾರ್ಯದರ್ಶಿ ಎ.ಉಮೇಶ್ ಹಾಗೂ ಇತರರು ಇದ್ದರು.










