ಚಿಕ್ಕಮಗಳೂರು : ಕಾಲುವೆಗೆ ಕಾಲು ಜಾರಿ ಬಿದ್ದು ಯುವಕ ನೀರುಪಾಲು…

138
firstsuddi

ಚಿಕ್ಕಮಗಳೂರು : ಕಾಲುವೆಗೆ ಕಾಲು ಜಾರಿ ಬಿದ್ದು ಯುವಕ ನೀರು ಪಾಲಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಹುಣಸಘಟ್ಟ ಗ್ರಾಮದ ಬಳಿ ನಡೆದಿದೆ. ದಾವಣಗೆರೆ ಮೂಲದ ಅಫ್ತಾಬ್(18) ನೀರುಪಾಲಾದ ಯುವಕ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಯುವಕನಿಗಾಗಿ ಶೋಧಾಕಾರ್ಯ ಆರಂಭಿಸಲು ಚಾನಲ್ ನೀರು ನಿಲ್ಲಿಸದ ಕಾರಣ ಶೋಧಕಾರ್ಯ ನಡೆಸಲು ವಿಳಂಬವಾಗುತ್ತಿದ್ದು, ಕೂಡಲೇ ನೀರನ್ನು ನಿಲ್ಲಿಸಬೇಕೆಂದು ಯುವಕನ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.