ನಾನು ನಾಲ್ಕನೇ ತರಗತಿ ವರೆಗೆ ಓದಲಿಲ್ಲ, ರಾಜ್ಯದ ಮುಖ್ಯಮಂತ್ರಿಯಾಗಿ 13 ಬಜೆಟ್ ಮಂಡಿಸಿದ್ದೇನೆ, ನಾನೇನು ದಡ್ಡನಾ..?-ಸಿದ್ದರಾಮಯ್ಯ.

216
firstsuddi

ಬೆಂಗಳೂರು : ಕೆ.ಪಿ.ಸಿ.ಸಿ. ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೊರೊನಾ ಹಿನ್ನೆಲೆ, ಮಕ್ಕಳಿಗೆ ಶಾಲೆ ಮುಖ್ಯವಲ್ಲ, ಮಕ್ಕಳ ಜೀವ ಮುಖ್ಯವಾಗಿದ್ದು, ಸದ್ಯಕ್ಕೆ ಶಾಲೆಯನ್ನು ಪ್ರಾರಂಭಿಸುವುದು ಬೇಡ. ಮಕ್ಕಳು ಜೀವಂತವಾಗಿದ್ದರೆ ವಿದ್ಯೆಯನ್ನು ಯಾವಾಗ ಬೇಕಾದರು ಕಲಿಯಬಹುದು. ವಿದ್ಯಾಗಮ ಹಾಗೂ ಶಾಲೆಯನ್ನು ಸದ್ಯಕ್ಕೆ ಪ್ರಾರಂಭಿಸದಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಈ ವರ್ಷ ಶಾಲೆಗೆ ಹೋಗದಿದ್ದರೆ ಏನು ತೊಂದರೆ ಆಗುವುದಿಲ್ಲ. ಶಾಲೆಯನ್ನು ಸದ್ಯಕ್ಕೆ ತೆರೆಯುವುದು ಬೇಡ ಎಂದು ಸಲಹೆ ನೀಡಿದರು.
ಈ ಒಂದು ವರ್ಷ ಶಾಲೆಗೆ ಕಳುಹಿಸದಿದ್ದರೆ ಏನು ಆಗಲ್ಲ. ಮಕ್ಕಳನ್ನು ಮುಂದಿನ ತರಗತಿಗೆ ಪಾಸ್ ಮಾಡಿ. ನಾನು ನಾಲ್ಕನೇ ತರಗತಿ ವರೆಗೆ ಓದಲಿಲ್ಲ. ಮತ್ತೆ ನೇರವಾಗಿ 5ನೇ ತರಗತಿಗೆ ಸೇರಿಕೊಂಡೆ. ಹಾಗಾದರೆ ನಾನೇನು ದಡ್ಡನೇ? ರಾಜ್ಯದ ಮುಖ್ಯಮಂತ್ರಿಯಾಗಿ 13 ಬಜೆಟ್ ಮಂಡಿಸಿದ್ದೇನೆ ಎಂದು ವಿದ್ಯಾಗಮಕ್ಕೆ ವಿರೋಧ ವ್ಯಕ್ತಪಡಿಸಿದರು.