ಮೂಡಿಗೆರೆ : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಕ್ರಮ…

288
firstsuddi

ಬಣಕಲ್ : ವಿಪತ್ತು ನಿರ್ವಹಣೆ ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ಸ್ವಯಂ ಸೇವಕರು ಸೇವಾ ಮನೋಭಾವದಿಂದ ರಕ್ಷಣಾ ಕಾರ್ಯಕ್ಕೆ ಬದ್ದರಾಗಿರಬೇಕು ಎಂದು ಗ್ರಾಮಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ವಿಠಲ್ ಪೂಜಾರಿ ಹೇಳಿದರು.
ತರುವೆ ಗ್ರಾ.ಪಂ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಕ್ರಮದಲ್ಲಿ ಅವರು ಹೇಳಿದರು.
ವಿಷಾನಿಲ ಸೋರಿಕೆ, ಭೂಕಂಪ, ರಸ್ತೆ ಅಪಘಾತಗಳು ಮುಂತಾಧ ವಿಫತ್ತುಗಳ ನಿರ್ವಹಣೆಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಆರಂಭಿಸಿದ ವಿಪತ್ತು ನಿರ್ವಹಣೆ ಫಟಕ ಇಂತಹ ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಬೇಕಾದ ತರಬೇತಿ ಪಡೆದ ತಂಡವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಾವಳಿ ವಲಯ ಮೇಲ್ವಿಚಾರಕ ಚಿತ್ತರಂಜನ್, ವಿಪತ್ತು ನಿರ್ವಹಣೆಯ ಸಹಾಯಕ ಮಹೇಶ್, ಕೃಷ್ಣಪ್ಪ ಹಾಗೂ ವಲಯದ ನಿರ್ವಹಣಾ ಸಮಿತಿಯ ಸದಸ್ಯರು ಇದ್ದರು.