ಸಿದ್ದರಾಮಯ್ಯ ಅವರು ನಿಯತ್ತಿನ ನಾಯಿಗಳನ್ನು ಬಿಟ್ಟು ಕಚ್ಚಾಡುವ ನಾಯಿಗಳನ್ನು ಸಾಕಿದ್ದಾರೆ : ಬಿ.ಸಿ. ಪಾಟೀಲ್.

121
firstsuddi

ಹಾವೇರಿ : ಸಿದ್ದರಾಮಯ್ಯ ಅವರು ನಿಯತ್ತಿನ ನಾಯಿಗಳನ್ನು ಬಿಟ್ಟು ಕಚ್ಚಾಡುವ ನಾಯಿಗಳನ್ನು ಸಾಕಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ 17 ಜನರ ಪಾಡು ನಾಯಿ ಪಾಡಾಗುತ್ತದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಯಿಸಿದ ಅವರು, ಮನುಷ್ಯರನ್ನು ನಾಯಿಗೆ ಹೋಲಿಸುವುದು, ಬಂಡೆಗೆ ಹೋಲಿಸುವುದು, ಹುಲಿ, ಟಗರುಗೆ ಹೋಲಿಸುವುದು ಇದು ಯಾವ ಸಂಸ್ಕೃತಿ. ಸಿದ್ದರಾಮಯ್ಯ ಅವರಿಗೆ ಆ ಸಂಸ್ಕೃತಿಯೇ ಇಲ್ಲ. ಸಿದ್ದರಾಮಯ್ಯ ಅವರ ಭಾಷೆ ಬಳಸಲು ನನಗೆ ಮನಸ್ಸು ಬರುತ್ತಿಲ್ಲ. ಇಂತಹ ಹೇಳಿಕೆಗಳು ಸಿದ್ದರಾಮಯ್ಯ ಅವರ ಘನತೆಗೆ ಸರಿ ಹೊಂದುವುದಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಕ್ಕೆ ಸಿದ್ದರಾಮಯ್ಯಗೆ ಪ್ರತಿಪಕ್ಷನಾಯಕ ಸ್ಥಾನ ಸಿಕ್ಕಿರುವುದು. ಅಲ್ಲಿಯ ತನಕ ಸಿದ್ದರಾಮಯ್ಯ ಬೇರೆ ಹೆಸರಿನ ಬೇನಾಮಿ ಹೆಸರಿನ ಮನೆಯಲ್ಲಿದ್ದರು ನಾಯಿಗಳಿಗೆ ನಿಯತ್ತು ಇರುತ್ತದೆ. ಸಿದ್ದರಾಮಯ್ಯ ಅವರು ನಿಯತ್ತಿನ ನಾಯಿಗಳನ್ನು ಸಾಕುವುದನ್ನು ಬಿಟ್ಟು ಕಚ್ಚಾಡುವ ನಾಯಿಗಳನ್ನು ಸಾಕಿದ್ದಾರೆ. ಡಿಕೆಶಿ 17 ಶಾಸಕರು ರಾಜಕೀಯ ಸಮಾಧಿಯಾಗ್ತಾರೆ ಎಂದು ತಿಳಿಸಿದ್ದರು. ಡಿಕೆಶಿ ಅವರದ್ದು ತಿರುಕನ ಕನಸು, ಹಗಲು ಕನಸು ಕಾಣುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.