ನಮ್ಮುಡುಗ್ರು ವಾಟ್ಸಪ್ ತಂಡದ ವತಿಯಿಂದ ನಮ್ಮುಡುಗ್ರು ಕಪ್ ಕ್ರಿಕೆಟ್ ಪಂದ್ಯಾವಳಿ….

403
ಮೂಡಿಗೆರೆ :ಯುವಪೀಳಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜದೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಬೇಕು ಎಂದು ಹಿರಿಯ ಕಾಫಿ ಬೆಳೆಗಾರರಾದ ಜಯರಾಮಗೌಡ ಹೇಳಿದರು.
ನಮ್ಮುಡುಗ್ರು  ವಾಟ್ಸಪ್ ತಂಡದ ವತಿಯಿಂದ ಭಾರತಿಬೈಲ್ ಕ್ರೀಡಾಂಗಣದಲ್ಲಿ ನಡೆದ ನಮ್ಮುಡುಗ್ರು ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಸುಧಾರಣೆಯಲ್ಲಿ ಯುವಕರದ್ದು ಬಹುದೊಡ್ಡ ಪಾತ್ರವಿದ್ದು ಇದಕ್ಕಾಗಿ ಅವರು ತಮ್ಮ ಹಕ್ಕು ಬಾಧ್ಯತೆಗಳ ಕುರಿತು ಜಾಗೃತರಾಗಬೇಕಾದ ಅನಿವಾರ್ಯತೆ ಇದೆ. ಯುವಪೀಳಿಗೆ ಕ್ರಿಯಾಶೀಲರಾಗಿ ತಾವು ಮಾಡುವ ಕೆಲಸದಲ್ಲಿ ಶ್ರದ್ದೆಯಿಂದ ಇದ್ದಲ್ಲಿ ಸಾಧನೆ ಮಾಡುವುದು ಸುಲಭವಾಗಲಿದೆ. ಕ್ರೀಯಾಶೀಲ ಮನಸ್ಸು ದೊರಕಬೇಕಿದ್ದಲ್ಲಿ ಯುವಪೀಳಿಗೆಗಳು ಕ್ರೀಡೆ ಕಡೆಗೂ ಗಮನ ಹರಿಸಬೇಕಿದೆ ಎಂದರು.
ನಮ್ಮುಡುಗ್ರು ವಾಟ್ಸ್ ಅಪ್ ತಂಡದ ಅಡ್ಮಿನ್ ದಿವಿನ್ ಮಗ್ಗಲಮಕ್ಕಿ ಮಾತನಾಡಿ ನಮ್ಮುಡುಗ್ರು  ವಾಟ್ಸ್ಅಪ್ ತಂಡ ಕೆಲವೆ ಕೆಲವು ಸದಸ್ಯರಿಂದ ಪ್ರಾರಂಭವಾಗಿ ಇಂದು ನೂರಾರು ಸದ್ಯಸರನ್ನು ಹೊಂದಿದೆ. ನೆರೆ ಪ್ರವಾಹದ ಸಂದರ್ಭದಲ್ಲಿ ಆಡಳಿತ ಯಂತ್ರ ಕಾರ್ಯಪ್ರವೃತ್ತರಾಗುವ ಮೊದಲೆ ನಮ್ಮುಡುಗ್ರು ತಂಡದ ಸದಸ್ಯರು ನೆರೆಪೀಡಿತ ಪ್ರದೇಶಗಳಿಗೆ ಹೋಗಿ ನೆರೆಸಂತ್ರಸ್ತರ ನೆರವಿಗೆ ನಿಂತಿತ್ತು. ಸ್ವಚ್ಚತಾ ಕಾರ್ಯಕ್ರಮ, ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮ ಸೇರಿದಂತೆ ಸಮಾಜಮುಖಿ ಕಾರ್ಯಗಳಲ್ಲಿ ನಮ್ಮುಡುಗ್ರು ತಂಡ ತೊಡಗಿಕೊಂಡಿದೆ ಎಂದರು.
ಕಾಫಿ ಬೆಳೆಗಾರರಾದ ರತೀಶ್ ಹಳೆಹಳ್ಳಿ ಮಾತನಾಡಿ ನಮ್ಮ ಹಿರಿಯರು ದೂರದೃಷ್ಟಿ, ಬದ್ದತೆ, ಜವಾಬ್ದಾರಿಯಿಂದ ಸಮಾಜವನ್ನು ಕಟ್ಟಿ ಬೆಳೆಸಿದರು. ಅಂತಹ ಹಿರಿಯರ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದರು. ಬಿ ಹೊಸಳ್ಳಿ ಗ್ರಾ.ಪಂ ಅಧ್ಯಕ್ಷ ರವಿಗೌಡ, ಕಾಫಿ ಬೆಳೆಗಾರರಾದ ಶಶಿಧರ್ ಹಳೇಹಳ್ಳಿ ಹಾಗೂ ನಮ್ಮುಡುಗ್ರು ವಾಟ್ಸ್ ಅಪ್ ತಂಡದ ಸದಸ್ಯರು ಇದ್ದರು.