ಕೇಂದ್ರ ಸರ್ಕಾರದ ಈ ತಿದ್ದುಪಡಿಗೆ ಬೆಂಬಲಿಸುತ್ತಿದ್ದೀರಲ್ಲ ನಾಚಿಕೆ ಆಗುವುದಿಲ್ಲವೇ ಕುಮಾರಸ್ವಾಮಿಯವರೇ..? : ಸಿದ್ದರಾಮಯ್ಯ ಪ್ರಶ್ನೆ…

184
firstsuddi

ಬೆಂಗಳೂರು : ಕೇಂದ್ರ ಸರ್ಕಾರದ ಈ ತಿದ್ದುಪಡಿಗೆ ಬೆಂಬಲಿಸುತ್ತಿದ್ದೀರಲ್ಲ ಇದು ಸರಿನಾ, ನಾಚಿಕೆ ಆಗುವುದಿಲ್ಲವೇ ಕುಮಾರಸ್ವಾಮಿಯವರೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಹಾಗೂ ಬಡವರಿಗೆ ಅನ್ಯಾಯವಾದರೆ ಅವರ ಪರವಾಗಿ ನಾವು ಧ್ವನಿ ಎತ್ತುತ್ತೇವೆ. ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ರೈತ ವಿರೋಧಿ ನೀತಿಗಳನ್ನು ನಿಷೇಧಿಸುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಅಪ್ಪ, ಅಣ್ಣ ರೈತರ ಪರ ಅಂತಾರೆ. ಆದರೆ ಕುಮಾರಸ್ವಾಮಿ ಅವರು ಮಾತ್ರ ಸರ್ಕಾರದ ಪರ ಕಾನೂನುಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಭೂಮಿ ಕೃಷಿಕರಿಗೆ ಮಾತ್ರ ಸೀಮಿತವಾಗಿರಬೇಕು ಎಂದು ಕಾನೂನಿನಲ್ಲಿದೆ. ಈಗಾ ಈ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸುತ್ತಿದ್ದೀರಲ್ಲ. ಇದು ಸರಿನಾ, ನಾಚಿಕೆ ಆಗುವುದಿಲ್ಲವಾ ಕುಮಾರಸ್ವಾಮಿಯವರೇ..? ಮಣ್ಣಿನ ಮಕ್ಕಳು, ರೈತರ ಮಕ್ಕಳು ಎಂದು ಹೇಳುತ್ತಾರೆ. ಹಾಗಾದರೆ ನಾವು ಯಾರ ಮಕ್ಕಳು..? ನಾಲಿಗೆ ಒಂದೇ ಇರಬೇಕು. ರೈತರ ಪರವಾಗಿ ಇಲ್ಲವೇ ರೈತರ ವಿರೋಧವಾಗಿ ಯಾವುದಾದರು ಒಂದೇ ನಿಲುವು ಇರಬೇಕು. ಎರಡು ರೀತಿ ಇರಬಾರದು ಕುಮಾರಸ್ವಾಮಿ ಅವರ ಬಳಿ ಬೇನಾಮಿ ಆಸ್ತಿ ಇರಬೇಕು. ಇದರಿಂದಾಗಿ ರೈತ ವಿರೋಧಿ ಕಾಯದೆಯನ್ನು ಬೆಂಬಲಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.