ಮಕ್ಕಳಾಗಲಿಲ್ಲ ಎಂದು ಮನನೊಂದು ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಶರಣು…

165
firstsuddi

ಮೈಸೂರು : ತನಗೆ ಮಕ್ಕಳಾಗಲಿಲ್ಲವೆಂದು ಮನನೊಂದು ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ವಿದ್ಯಾರಣ್ಯಪುರಂ ನಲ್ಲಿ ನಡೆದಿದೆ. ಮಹೇಶ್(39) ಆತ್ಮಹತ್ಯೆಗೆ ಶರಣಾದ ಕಾನ್ಸ್ ಟೇಬಲ್ ಎಂದು ಗುರುತಿಸಲಾಗಿದೆ. ಮಹೇಶ್ ಅವರು ವಿವಾಹವಾಗಿ ಬಹಳ ವರ್ಷವಾದರು ತಮಗೆ ಮಕ್ಕಳಾಗಿಲ್ಲವೆಂದು ಕೊರಗಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಈ ಕಾರಣದಿಂದಾಗಿ ವಿದ್ಯಾರಣ್ಯಪುರಂನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.