ಮೂಡಿಗೆರೆ : ದಾರಿ ತಪ್ಪಿ ನಾಡಿಗೆ ಬಂದಿದ್ದ ಕಡವೆ ಮರಿಯನ್ನು ರಕ್ಷಿಸಿದ ಊರುಬಗೆ ಗ್ರಾಮಸ್ಥರು…

482
firstsuddi

ಕೊಟ್ಟಿಗೆಹಾರ : ದಾರಿ ತಪ್ಪಿ ನಾಡಿಗೆ ಬಂದಿದ್ದ ಕಡವೆ ಮರಿಯನ್ನು ರಕ್ಷಿಸಿದ ಊರುಬಗೆ ಗ್ರಾಮಸ್ಥರು ಆರೈಕೆ ಮಾಡಿ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಟ್ಟರು.
ಇಂದು ದಾರಿತಪ್ಪಿ ಊರುಬಗೆ ಗ್ರಾಮಕ್ಕೆ ಕಡವೆ ಮರಿಯೊಂದು ಬಂದಿದ್ದು ಗ್ರಾಮಸ್ಥರು ನಿತ್ರಾಣಗೊಂಡಿದ್ದ ಕಡವೆ ಮರಿಗೆ ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು ಕಡವೆ ಮರಿ ಚೇತರಿಸಿಕೊಂಡ ನಂತರ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಚೇತನ್, ಅರಣ್ಯ ರಕ್ಷಕ ಕುಮಾರ್, ಆನಂದ್ ಊರುಬಗೆ ಗ್ರಾಮಸ್ಥರಾದ ಚಂದ್ರೆಗೌಡ, ಸುನಿಲ್, ಸಂದೀಪ್ ಹೊಸಕೆರೆ, ಅಶ್ವತ್, ರಘುಪತಿ ಮುಂತಾದವರು ಇದ್ದರು.