ಮೂಡಿಗೆರೆ : ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿ ನಾಯಕತ್ವ ಗುಣ ಬೆಳೆಸಿಕೊಳ್ಳೋಣ : ಡಿ.ಟಿ ನವೀನ್ ಕುಮಾರ್.

178
firstsuddi

ಕೊಟ್ಟಿಗೆಹಾರ : ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿ ನಾಯಕತ್ವ ಗುಣ ಬೆಳೆಸಿಕೊಳ್ಳೋಣ ಎಂದು ಜೆಸಿಐ ಬಣಕಲ್ ವಿಸ್ಮಯದ ನೂತನ ಅಧ್ಯಕ್ಷ ಡಿ.ಟಿ ನವೀನ್ ಕುಮಾರ್ ಹೇಳಿದರು.
ಬಣಕಲ್‍ನ ಗ್ರಾ.ಪಂ ಸಭಾಂಗಣದಲ್ಲಿ ನಡೆದ 2021ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಲವು ಯುವನಾಯಕರಿಗೆ ಶಿಸ್ತುಬದ್ಧ ತರಬೇತಿ ನೀಡಿ ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ಸಮಾಜ, ದೇಶಕ್ಕೆ ಸತ್ಪ್ರಜೆಗಳನ್ನು ನೀಡುವ ಕಾರ್ಯದಲ್ಲಿ ಜೇಸಿಐ ಮುಂಚೂಣಿಯಲ್ಲಿದೆ ಎಂದರು.
ವಲಯ ಪೂರ್ವ ಅಧ್ಯಕ್ಷ ರಾಜೇಂದ್ರ ಭಟ್ ಅವರು ಮಾತನಾಡಿ ವಿಶ್ವ ಮಾನವತ್ವದ ಸಾರವನ್ನು ಜೇಸಿಐ ಬೋಧಿಸುತ್ತದೆ. ಎಲ್ಲರೂ ಸಮಾನರು, ಎಲ್ಲರನ್ನೂ ಮಾನವತ್ವದ ದೃಷ್ಟಿಯಿಂದ ನೋಡುವುದನ್ನು ಜೇಸಿಐ ಕಲಿಸುತ್ತದೆ ಎಂದರು.

ಬಣಕಲ್ ಜೇಸಿಐ ಸ್ಥಾಪಕ ಅಧ್ಯಕ್ಷ ಸುರೇಶ್ ಎಸ್ ಶೆಟ್ಟಿ ಅವರು ಮಾತನಾಡಿ, ಸಮಾಜ ಸೇವೆಯೊಂದಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ಬೆಳೆಸಿಕೊಳ್ಳಲು ಜೇಸಿಐ ಪೂರಕ ವಾತಾವರಣ ಕಲ್ಪಿಸುತ್ತದೆ. ಅವಕಾಶದ ಸದ್ಬಳಕೆ ಮಾಡಿಕೊಳ್ಳುವಿಕೆಯಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ನಿಕಟಪೂರ್ವ ಅಧ್ಯಕ್ಷರುಗಳಾದ ರವಿ ವಾಟೆಖಾನ್, ದಿನೇಶ್, ವಲಯ ಅಧ್ಯಕ್ಷ ಭರತ್ ಎನ್ ಆಚಾರ್ಯ, ವಲಯ ಉಪಾಧ್ಯಕ್ಷ ವಿಜಯ ಕುಮಾರ್, ನಿಕಟಪೂರ್ವ ವಲಯ ಅಧ್ಯಕ್ಷರಾದ ಸಮತಾ ಮಿಸ್ಕಿತ್, ಕಾರ್ಯದರ್ಶಿ ಸುರೇಂದ್ರ ಕೋಳೂರು, ಜೇಸಿ ರೆಟ್ ಅಧ್ಯಕ್ಷೆ ಮದುರಾ ಕವೀಶ್, ಕಾರ್ಯದರ್ಶಿ ಶಬರಿಶ್ರೀನಾಥ್, ಪದಾಧಿಕಾರಿಗಳಾದ ಕೃಷ್ಣೆಗೌಡ, ಸಂಜಯ್‍ಗೌಡ ಕೊಟ್ಟಿಗೆಹಾರ, ಅಭಿಲಾಷ್,ರಾಘವೇಂದ್ರ, ರಚಿತಾ ರತ್ನಾಕರ್, ಕೆ.ಎಲ್ ರವಿ, ಅರವಿಂದ, ಗಗನ್, ಸಂಯಮ್, ದರ್ಶ ಮುಂತಾದವರು ಇದ್ದರು.