ಮನೆಯ ಟೆರಸ್ ಮೇಲೆ ನಿಂತಿದ್ದ ಯುವತಿಗೆ ಗುಂಡು ಹಾರಿಸಿ ಯುವಕ ಪರಾರಿ…

188
first suddi

ಜೈಪುರ : ಮನೆಯ ಟೆರಸ್ ಮೇಲೆ ನಿಂತಿದ್ದ ಯುವತಿಗೆ ಗಂಡುಹೊಡೆದು ಕೊಲೆಗೈದಿರುವ ಘಟನೆ ಭಾರತ್‍ಪುರದ ಮುಖರ್ಜಿ ನಗರದಲ್ಲಿ ನಡೆದಿದೆ. ಮೃತ ಯುವತಿ 19 ವರ್ಷ ಅಂಕಿತಾ ಎಂದು ಗುರುತಿಸಲಾಗಿದ್ದು, ಪಕ್ಕದ ಮನೆಯ ಯುವಕ ಸುನೀಲ್ ಅಂಕಿತಾಳನ್ನು ಪ್ರೀತಿಸುತ್ತಿದ್ದು ಆರೋಪಿ ಸುನೀಲ್ ಕೊಲೆಗೈದು ಪರಾರಿಯಾಗಿದ್ದಾನೆ. ಅಂಕಿತಾಳ ತಾಯಿ ಹಾಗೂ ತಂದೆ ಇಬ್ಬರು ಶಿಕ್ಷಕರಾಗಿದ್ದು, ಇಂದು ಗಣರಾಜೋತ್ಸವ ಇದ್ದಿದ್ದರಿಂದ ಬೆಳಗ್ಗೆ ಶಾಲೆಗೆ ಹೋಗಿದ್ದರು. ಇದನ್ನು ಗಮನಿಸಿದ ಯುವಕ ಸುನೀಲ್, ವಾಟರ್ ಟ್ಯಾಂಕ್ ತುಂಬಿಸಲು ಟೆರಸ್ ಮೇಲೆ ಹೋದ ಅಂಕಿತಾಳಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಮನೆಯ ಒಳಗೆ ಇದ್ದ ಅಂಕಿತಾಳ ಸೋದರಿ ಪೊಲೀಸರಿಗೆ ತಿಳಿಸಿದ್ದಾಳೆ. ಸ್ಥಳಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.