ತಮಿಳಿನ ಖ್ಯಾತ ನಟ ಸೂರ್ಯಗೆ ಕೊರೊನಾ ಪಾಸಿಟಿವ್…

145
First Suddi

ಚೆನ್ನೈ: ಕಾಲಿವುಡ್ ನಟ ಸೂರ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಅವರು ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಇನ್ನೂ ಕೊರೊನಾ ವೈರಸ್ ಹೋಗಿಲ್ಲ. ಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ನನಗೆ ಆರೈಕೆ ಮಾಡುತ್ತಿರುವ ಡಾಕ್ಟರುಗಳಿಗೆ ಥ್ಯಾಂಕ್ಸ್” ಎಂದು ಸೂರ್ಯ ಅವರು ಟ್ವೀಟ್ ಮಾಡಿದ್ದಾರೆ.
ಇನ್ನೂ ಸೂರ್ಯ ಅವರಿಗೆ ಕೊರೊನಾ ಆವರಿಸಿರುವ ಸುದ್ಧಿ ಕೇಳಿ ಅವರ ಅಭಿಮಾನಿಗಳಿಗೆ ಶಾಕ್ ಆಗಿದ್ದು, ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ಹಾರೈಸುತ್ತಿದ್ದಾರೆ.