ಡ್ರಗ್ಸ್ ಕೇಸ್ : ಕಾಮೆಂಟ್ಸ್ ಗೆ ಬೇಸತ್ತು ಕಣ್ಣೀರು ಹಾಕಿದ ನಟಿ ರಾಗಿಣಿ ದ್ವಿವೇದಿ.

146
First Suddi

ಬೆಂಗಳೂರು : ನಟಿ ರಾಗಿಣಿ ದ್ವಿವೇದಿ ಅವರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದೀಗ ತಮಗೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಕೆಟ್ಟ ಕಾಮೆಂಟ್ಸ್ ಗಳ ಬಗ್ಗೆ ಇನ್ಸ್ಟಾಗ್ರಾಮ್ ಲೈವ್‍ನಲ್ಲಿ ಕಣ್ಣೀರು ಹಾಕಿದ್ದಾರೆ.
ನನಗೆ ಅನೇಕ ಕೆಟ್ಟ ಕಾಮೆಂಟ್ ಗಳು ಬಂದಿವೆ.  ಅದನ್ನು ನಾನು ಪಾಸಿಟಿವ್ ಆಗಿಯೇ ಸ್ವೀಕರಿಸಿದ್ದೇನೆ.  ಆದರೆ ಡ್ರಗ್ಸ್ ಪಾರ್ಟಿ ವಿಚಾರ ಇಟ್ಟುಕೊಂಡು ಕೆಲವರು ನನಗೆ ತುಂಬಾ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ನನಗೆ ಹೆಸರುಗಳನ್ನು ಇಟ್ಟಿದ್ದಾರೆ.  ಹೆಣ್ಣುಮಕ್ಕಳಿಗೆ ಈ ಥರ ಹೆಸರಿಟ್ಟು, ಅವರ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ಏನು ಖುಷಿ ಸಿಗುತ್ತೋ ನನಗೆ ತಿಳಿಯುತ್ತಿಲ್ಲ. ನಿಮಗೆ ಖುಷಿ ಸಿಕ್ಕಿದೆ ಅಂದರೆ ನನಗೂ ಕೂಡ ಸಂತೋಷ. ಹೇಗೋ ಒಂದು ರೀತಿಯಲ್ಲಿ ನಿಮಗೆ ಖುಷಿಕೊಟ್ಟಿದ್ದೇನೆ ಎಂದಿದ್ದಾರೆ.
ನಾನು ತುಂಬಾ ಕಷ್ಟಪಟ್ಟಿದ್ದೇನೆ. ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ, ಅದಕ್ಕೆ ಸಮಯ ಬೇಕಾಗಿದೆ. ಎಂದು ಇನ್ಸ್ಟಾಗ್ರಾಮ್ ಲೈವ್‍ನಲ್ಲಿ ರಾಗಿಣಿ ಕಣ್ಣೀರು ಸುರಿಸಿದ್ದಾರೆ.