ಗುಜರಾತ್ ಸಿಎಂ ವಿಜಯ್ ರೂಪಾನಿ ಅವರಿಗೆ ಕೊರೊನಾ ಸೋಂಕು ದೃಢ…

153
First Suddi

ಗುಜರಾತ್‍ನ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೆ ಕೊರೊನಾ ಸೋಂಕು ತಗುಲಿದೆ. ನಿನ್ನೆ ವಡೋದರಾದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಸಭೆಯನ್ನುದ್ದೇಶಿಸಿ ಭಾಷಣ ಮಾಡುತ್ತಿರುವಾಗ ಸಿಎಂ ವಿಜಯ್ ರೂಪಾನಿ ಅವರು ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒತ್ತಡ ಮತ್ತು ಆಯಾಸದಿಂದ ಬಿಪಿ ಕಡಿಮೆಯಾಗಿ ಅವರು ಕುಸಿದು ಬಿದ್ದಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ಆದರೆ ಇಂದು ಯುಎನ್ ಮೆಹ್ತಾ ಆಸ್ಪತ್ರೆ ಆರೋಗ್ಯ ಬುಲೆಟಿನ್ ಹೊರಡಿಸಿದ್ದು, ವಿಜಯ್ ರೂಪಾನಿ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ದೃಢಪಡಿಸಿದ್ದಾರೆ.