ಬೆಂಗಳೂರು : ನಟ ಚಿರಂಜೀವಿ ಸರ್ಜಾ ಅವರ ನಟನೆಯ ಕೊನೆಯ ಸಿನಿಮಾ ರಾಜಮಾರ್ತಾಂಡ ಚಿತ್ರದ ಟ್ರೈಲರ್ ಅನ್ನು ಚಿರು ಮಗ ಜೂನಿಯರ್ ಚಿರು ಲಾಂಚ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮುದ್ದು ಕೈಬೆರಳುಗಳಿಂದ ಅಪ್ಪನ ಸಿನಿಮಾದ ರಾಜಮಾರ್ತಾಂಡ ಟ್ರೈಲರ್ ನ ವೀಡಿಯೋ ಪ್ಲೇ ಮಾಡುತ್ತಿರುವ ವೀಡಿಯೋವನ್ನು ಮೇಘನಾರಾಜ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜಾಮಾರ್ತಾಂಡ ಸಿನಿಮಾ ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾಗಿದೆ. ಈ ಸಿನಿಮಾವವನ್ನು ತಂಬಾ ಇಷ್ಟಪಟ್ಟು ಮಾಡಿದ್ದರು. ಇಲ್ಲಿವರೆಗೂ ಮಾಡಿರುವ ಪಾತ್ರಗಳಿಗಿಂತ ಅತ್ಯಂತ ವಿಭಿನ್ನ ಹಾಗೂ ವಿಶಿಷ್ಟವಾಗಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪನಿಗೋಸ್ಕರ ಅಪ್ಪನಿಗಾಗಿ ಮತ್ತು ಸಿನಿಮಾತಂಡಕ್ಕಾಗಿ ಜೂನಿಯರ್ ಚಿರು ಟ್ರೈಲರ್ ಲಾಂಚ್ ಮಾಡುತ್ತಿದ್ದಾನೆ. ಚಿರು ನಟನೆ ಮಾಡಿರುವ ಚಿತ್ರಕ್ಕೆ ಧ್ರುವ ಸರ್ಜಾ ಧ್ವನಿಯನ್ನು ನೀಡಿದ್ದಾರೆ. ಮಗ ಟ್ರೈಲರ್ ಲಾಂಚ್ ಮಾಡಿದ್ದಾರೆ. ಸಿನಿಮಾಕ್ಕೆ ಶುಭಾಶಯಗಳು ಎಂದು ಹೇಳಿ ಮುದ್ದು ಮಗು ಟ್ರೈಲರ್ ರೀಲಿಸ್ ಮಾಡಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.










