ಕೊಟ್ಟಿಗೆಹಾರ : ಕೂವೆ ಗ್ರಾ.ಪಂ ನೂತನ ಕಟ್ಟಡದ ಗುದ್ದಲಿಪೂಜೆಯನ್ನು ಇಂದು ಗ್ರಾ.ಪಂ ಅಧ್ಯಕ್ಷ ಸತೀಶ್ ಹಾದಿಓಣಿ ನೆರವೇರಿಸಿದರು.
ನಂತರ ಮಾತನಾಡಿದ ಅವರು, 14ನೇ ಹಣಕಾಸು ಯೋಜನೆಯಡಿ 3 ಲಕ್ಷ ಹಾಗೂ ಎನ್ಆರ್ಇಜಿಎಸ್ ನ ಸುಮಾರು 29 ಲಕ್ಷ ಅನುದಾನದಲ್ಲಿ ಗ್ರಾ.ಪಂ ನೂತನ ಕಟ್ಟಡ ನಿರ್ಮಾಣವಾಗಲಿದೆ. ಗ್ರಾಮದ ಸಮಗ್ರ ಅಭಿವೃದ್ದಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸಂಘಟಿತರಾಗಿ ಶ್ರಮಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಉಮಾಅಶೋಖ್, ಸದಸ್ಯರಾದ ಶಿವರಾಜ್, ಸುಂದರೇಶ್, ರಾಜೇಶ್, ರಮೇಶ್, ದಿನೇಶ್, ಚಿತ್ರೋದರಿ, ಶಶಿತಾ, ರಮ್ಯ, ಹೇಮಾ, ಬೇಬಿ, ಪಿಡಿಓ ನವೀನ್ ಕುಮಾರ್, ಸಿಬ್ಬಂದಿ ಸಂತೋಷ್, ಸತೀಶ್, ಲಕ್ಷ್ಮಣ, ಶೃತಿ, ಸವಿತ, ಗುತ್ತಿಗೆದಾರ ಮೊಹ್ಮಮದ್, ಗ್ರಾಮಸ್ಥರಾದ ನಂದನ್, ಅಶೋಕ್, ಪ್ರವೀಣ್, ರವಿ ಭಂಡಾರಿ, ಶ್ರೇಯಸ್, ವಾಸು ಪೂಜಾರಿ, ಶಿವಣ್ಣ ಮುಂತಾದವರು ಇದ್ದರು.










