ಕೊಟ್ಟಿಗೆಹಾರ : ನಿಡುವಾಳೆ ಗ್ರಾ.ಪಂ. ಯ ನೂತನ ಪದಾಧಿಕಾರಿಗಳು ಶಾಸಕ ಎಂ.ಪಿ ಕುಮಾರಸ್ವಾಮಿ ಅವರನ್ನು ಅವರ ನಿವಾಸದಲ್ಲಿ ಬೇಟಿ ನೀಡಿ ಗ್ರಾಮದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ನಿಡುವಾಳೆ ಗ್ರಾ.ಪಂ ಅಧ್ಯಕ್ಷೆ ಶೃತಿ ಮಾತನಾಡಿ ನಿಡುವಾಳೆ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ಗಳ ನಿರ್ಮಾಣ ಮಾಡುವ ಅಗತ್ಯವಿದ್ದು ಶಾಸಕರು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಗ್ರಾ.ಪಂ ಉಪಾಧ್ಯಕ್ಷ ನವೀನ್ ಹಾವಳಿ ಮಾತನಾಡಿ ನಿಡುವಾಳೆಯ ಹಳ್ಳಿಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಕಾಂಕ್ರೇಟ್ ರಸ್ತೆಗಳ ನಿರ್ಮಾಣ ಮಾಡಬೇಕಿದೆ. ಶಾಸಕರು ತಮ್ಮ ಅನುದಾನದಲ್ಲಿ ರಸ್ತೆ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ, ನಿಡುವಾಳೆ ಗ್ರಾ.ಪಂ ಅಧ್ಯಕ್ಷೆ ಶೃತಿ, ಉಪಾಧ್ಯಕ್ಷ ನವೀನ್ ಹಾವಳಿ ಅವರನ್ನು ಸನ್ಮಾನಿಸಿದರು.
ಬಾಳೂರು ಹೋಬಳಿ ಬಿಜೆಪಿ ಅಧ್ಯಕಷ್ ಎಂ.ಎಲ್ ವಿಜೇಂದ್ರ, ಗ್ರಾ.ಪಂ ಸದಸ್ಯರಾದ ಅರುಣ, ಗುಲಾಬಿ ಮುಂತಾದವರು ಇದ್ದರು.










