ಮೀಸಲಾತಿ ಕೇಳುವುದು ತಪ್ಪೇನಿಲ್ಲ,ಸಂವಿಧಾನಾತ್ಮಕವಾಗಿ ಅರ್ಹತೆ ಇರುವವರಿಗೆ ಮೀಸಲಾತಿ ಕೊಡಿ: ಮಾಜಿ ಸಿಎಂ ಸಿದ್ದರಾಮಯ್ಯ.

112
firstsuddi

ಉಡುಪಿ :ಮೀಸಲಾತಿ ಕೇಳುವುದು ತಪ್ಪೇನಿಲ್ಲ. ಸಂವಿಧಾನಾತ್ಮಕವಾಗಿ ಅರ್ಹತೆ ಇರುವವರಿಗೆ ಮೀಸಲಾತಿ ಕೊಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಜಾತಿ ಹೋರಾಟಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಪರಿಶಿಲಿಸಿ ಶಿಫಾರಸ್ಸು ಮಾಡಬೇಕು. ಹೊಸ ಸೇರ್ಪಡೆ ಮತ್ತು ಮೀಸಲಾತಿ ಕೈಬಿಡುವ ಬಗ್ಗೆ ಆಯೋಗ ಶಿಫಾರಸು ಮಾಡಬೇಕು. ರಾಜ್ಯದಲ್ಲಿ ಪ್ರತಿನಿತ್ಯ ಹೋರಾಟಗಳು ನಡೆಯುತ್ತಿದೆ ಸರಕಾರ ಸಂವಿಧಾನಾತ್ಮಕವಾಗಿ ಶೀಘ್ರ ತೀರ್ಮಾನ ಮಾಡಲಿ ಎಂದು ಸಿದ್ದರಾಮಯ್ಯ ಸಲಹೆ ಕೊಟ್ಟರು.

ಇದೇ ಸಂದರ್ಭದಲ್ಲಿ ಐಎಂಎ ವಂಚಕ ಮನ್ಸೂರ್ ಗೂ ನನಗೂ ಯಾವುದೇ ಸಂಬಂಧ ಇಲ್ಲ. ಯಾರಿಗೋ ಕೊಟ್ಟು ನನಗೆ ಕೊಟ್ಟಿದ್ದಾನೆ ಅಂದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು

ಅವನು ಯಾರಿಗೆ ಕೊಟ್ಟಿದ್ದಾರೆ ಅವನಿಂದ ವಸೂಲಿ ಮಾಡಿ. ಐ ಡುನಾಟ್ ನೋ.. ನಾನು ಯಾರಿಂದಲೂ 5 ಪೈಸೆ ಪಡೆದಿಲ್ಲ. ನನಗೆ ಮನ್ಸೂರ್ ನಿಂದ ಹಣ ಪಡೆಯುವ ಯಾವ ಅಗತ್ಯವೂ ಇಲ್ಲ ಎಂದು ಸಿದ್ದು ಉತ್ತರಿಸಿದ್ರು. ಅಯೋಧ್ಯೆ ನಿಧಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಮಂದಿರ ಬಗ್ಗೆ ನಾನೇನು ತಪ್ಪು ಹೇಳಿದ್ದೇನೆ. ಅಯೋಧ್ಯೆಗೆ ನಾನು ನಿಧಿ ಕೊಡುವುದಿಲ್ಲ, ನನ್ನೂರಿನ ರಾಮಮಂದಿರಕ್ಕೆ ಕೊಡುತ್ತೇನೆ. ನಾನು ಹೇಳಿದ್ದು ತಪ್ಪಾ? ನಮ್ಮೂರಿನಲ್ಲಿ ಆಗ್ತಿರೋದು ರಾಮಮಂದಿರ ಅಲ್ವಾ? ನನ್ನೂರಲ್ಲಿ ಕಟ್ಟುವುದು ದಶರಥ ಪುತ್ರ ರಾಮ ಮಂದಿರ ಅಲ್ವಾ?

ನನ್ನ ಮಾತಿನಲ್ಲಿ ವಿವಾದ ಆಗುವಂಥದ್ದು ಏನಿದೆ ಎಂದು ಸಿದ್ದರಾಮಯ್ಯ ಆರೋಪಗಳ ವಿರುದ್ಧ ಗರಂ ಆದರು
ಬಿಜೆಪಿಯ ಒಬ್ಬರಲ್ಲೂ ದೇಶ ನಿಷ್ಠೆ ಇಲ್ಲ, ಬಿಜೆಪಿಯಿಂದ ಯಾರು ದೇಶಕ್ಕಾಗಿ ಸತ್ತಿಲ್ಲ. ಯಾವ ಸ್ವಾಮಿಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.