ಮೂಡಿಗೆರೆ : ಸಾರ್ವಜನಿಕರಿಗೆ ಸಾಮಾನ್ಯ ಕಾನೂನುಗಳ ಅರಿವು ಇರುವುದು ಅತಿಮುಖ್ಯವಾಗಿದೆ : ಪಿಎಸ್‍ಐ ರೇಣುಕಾ.

176
First Suddi

ಕೊಟ್ಟಿಗೆಹಾರ : ಸಾರ್ವಜನಿಕರಿಗೆ ಸಾಮಾನ್ಯ ಕಾನೂನುಗಳ ಅರಿವು ಇರುವುದು ಅತಿಮುಖ್ಯವಾಗಿದೆ ಎಂದು ಬಾಳೂರು ಠಾಣೆ ಪಿಎಸ್‍ಐ ರೇಣುಕಾ ಹೇಳಿದರು.

ನಿಡುವಾಳೆ ಗ್ರಾ.ಪಂ ವತಿಯಿಂದ ನಿಡುವಾಳೆಯಲ್ಲಿ ನಿನ್ನೆ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿಗೂ ದೇಶದಲ್ಲಿ ಬಾಲ್ಯವಿವಾಹಗಳು ನಡೆಯುವ ಪ್ರಕರಣಗಳು ದೇಶದಲ್ಲಿ ಕೆಲವೆಡೆ ವರದಿಯಾಗುತ್ತಿರುತ್ತದೆ. ಬಾಲಕಿಯರ ಆರೋಗ್ಯ ಸ್ಥಿತಿಗತಿ ಅರಿತು ಬಾಲ್ಯವಿವಾಹ ತಡೆಯಲು ಮುಂದಾಗಬೇಕಿದೆ ಎಂದರು.

ನಿಡುವಾಳೆ ಗ್ರಾ.ಪಂ ಅಧ್ಯಕ್ಷೆ ಶೃತಿ ಮಾತನಾಡಿ ಅಕ್ರಮ ಮದ್ಯ ಮಾರಾಟದಿಂದ ಜನರು ದುಶ್ಚಟಕ್ಕೆ ಬಲಿಯಾಗುವುದರ ಜೊತೆಗೆ ದುಪ್ಪಟ್ಟು ಹಣ ನೀಡಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕಿದೆ ಎಂದರು.

ಗ್ರಾ.ಪಂ ಉಪಾಧ್ಯಕ್ಷ ನವೀನ್ ಹಾವಳಿ ಮಾತನಾಡಿ ನಿಡುವಾಳೆ ಗ್ರಾ.ಪಂ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಪೋಲಿಸ್ ಇಲಾಖೆ ಕ್ರಮ ಕೈಗೊಂಡು ಅಕ್ರಮ ಮದ್ಯ ಮಾರಾಟ ತಡೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ನಿಡುವಾಳೆ ಶಾಲೆ ಮುಖ್ಯ ಶಿಕ್ಷಕ ಪೂರ್ಣೇಶ್, ಪಿಡಿಓ ಚಂದ್ರಾವತಿ, ಅಂಗನಾವಡಿ ಕಾರ್ಯಕರ್ತೆ ಸುಮಿತ್ರ, ಮುಂತಾದವರು ಇದ್ದರು.