ವಿನಯ್ ಕುಲಕರ್ಣಿ ಅವರ ನಿವಾಸಕ್ಕೆ ಭೇಟಿ ನೀಡಿದ ನಟ ದರ್ಶನ್.

95
Firstsuddi

ಧಾರವಾಡ : ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಧಾರವಾಡ ನಗರದ ಶಿವಗಿರಿ ಬಡಾವಣೆಯಲ್ಲಿರುವ ಮನೆಗೆ ನಿನ್ನೆ ತಡರಾತ್ರಿ ಡಿ ಬಾಸ್ ಭೇಟಿ ನೀಡಿದ್ದಾರೆ. ನಿನ್ನೆ ಹುಬ್ಬಳ್ಳಿಯಲ್ಲಿ ರಾಬರ್ಟ್ ಸಿನಿಮಾ ಆಡಿಯೋ ರೀಲಿಸ್ ಗಾಗಿ ಆಗಮಿಸಿದ್ದ ನಟ ದರ್ಶನ್, ಮಧ್ಯಾಹ್ನ ಕುಲಕರ್ಣಿ ಅವರ ಮನೆಗೆ ಭೇಟಿ ನೀಡುತ್ತಾರೆ ಎಂಬ ಮಾಹಿತಿ ಇತ್ತು. ಅದಕ್ಕಾಗಿ ಬೆಳಗ್ಗೆಯಿಂದಲೇ ಅಭಿಮಾನಿಗಳು ಕುಲಕರ್ಣಿ ಅವರ ನಿವಾಸದ ಬಳಿ ಕಾದು ಕುಳಿತ್ತಿದ್ದರು. ಆದರೆ ತಡರಾತ್ರಿ ಭೇಟಿ ನೀಡಿದ ದರ್ಶನ್, ಕುಲಕರ್ಣಿ ಕುಟುಂಬದವರಿಗೆ ಧೈರ್ಯ ಹೇಳಿದರು.