ಸಿಡಿ ತನಿಖೆ : ಯುವತಿಯ ಬಟ್ಟೆ ವಶಕ್ಕೆ ಪಡೆದ ಎಸ್‍ಐಟಿ ; ಎಫ್‍ಎಸ್‍ಎಲ್ ಗೆ ರವಾನಿಸಲು ಸಿದ್ಧತೆ…

143
firstsuddi

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಸಿಡಿಯಲ್ಲಿರುವ ಯುವತಿ ವಾಸವಿದ್ದ ಆರ್. ಟಿ ನಗರದಲ್ಲಿರುವ ಪಿಜಿ ಕೇಂದ್ರಕ್ಕೆ ಎಸ್‍ಐಟಿ ಅಧಿಕಾರಿಗಳು ಸತತ ಮೂರು ಗಂಟೆಗಳ ಕಾಲ ಸ್ಥಳ ಮಹಜರು ಮಾಡಿದ್ದು, ಇದೀಗ ಅಂತ್ಯಗೊಂಡಿದೆ. ಎಸ್‍ಐಟಿ ಅಧಿಕಾರಿಗಳು ವಶಕ್ಕೆ ಪಡೆದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ಎಫ್‍ಎಸ್‍ಎಲ್ ಗೆ ರವಾನಿಸುವುದಾಗಿ ತಿಳಿದುಬಂದಿದೆ.