ಚಿಕ್ಕಮಗಳೂರು : ಸಾರ್ವಜನಿಕರು ಸಾಮಾನ್ಯ ಸೇವಾ ಕೇಂದ್ರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು : ಪಲ್ಲವಿ ರವಿ.

254
firstsuddi

ಚಿಕ್ಕಮಗಳೂರು : ಸಾರ್ವಜನಿಕರು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಲು ಮುಂದಾಗಬೇಕು ಎಂದು ರಾಜ್ಯದ ಸಿ.ಎಸ್.ಸಿ ಅಧ್ಯಕ್ಷ ಸಂಜಯ್ ಕುಲಕರ್ಣಿ ಮನವಿ ಮಾಡಿದರು.
ಇಲ್ಲಿನ ವಿಜಯಪುರದ ನೆಹರು ರಸ್ತೆಯಲ್ಲಿ ನೂತನವಾಗಿ ಸ್ಥಾಪಿಸಲಾದ ಆಧಾರ್ ಸೇವಾ ಕೇಂದ್ರವನ್ನು ಇಂದು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆಧಾರ್ ನೋಂದಣಿ, ತಿದ್ದುಪಡಿ, ನವೀಕರಣ, ಮತದಾರರ ಗುರುತಿನ ಚೀಟಿ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡುಗಳು, ಸೇವಾ ಸಿಂಧು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಸೇವೆಗಳು ಕನಿಷ್ಠ ದರದಲ್ಲಿ ದೊರೆಯಲಿದ್ದು, ಅವುಗಳನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಗ್ರಾಮೀಣ ಜನತೆಗಾಗಿ ಸದ್ಯದಲ್ಲೇ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಪ್ರಾವಿಜನ್ ಶಾಪ್, ಇ-ಸ್ಟಾಂಪ್ ಸೇವೆ ಆರಂಭಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ರವಿ ಸಾರ್ವಜನಿಕರು ಸಾಮಾನ್ಯ ಸೇವಾ ಕೇಂದ್ರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಾಮಾನ್ಯ ಸೇವಾ ಕೇಂದ್ರಗಳ ಜಿಲ್ಲಾ ವ್ಯವಸ್ಥಾಪಕರಾದ ಸಿ.ಎನ್.ಹೇಮಂತ್ ಕುಮಾರ್, ನಿಶ್ಚಿತ್ ಗೌಡ, ಶಿವಮೊಗ್ಗ ಜಿಲ್ಲಾ ವ್ಯವಸ್ಥಾಪಕರಾದ ಕಿರಣ್ ಕುಮಾರ್, ಎಸ್.ಶ್ರೀನಿವಾಸ್, ಎನ್.ಡಿ.ಮಂಜುನಾಥ್, ಬಸವರಾಜ್, ರಾಕೇಶ್, ಸುಜಿತ್ ಉಪಸ್ಥಿತರಿದ್ದರು.