ಬೆಂಗಳೂರು : ಇಂದು ವರನಟ ಡಾ. ರಾಜ್ ಕುಮಾರ್ ಅವರು ಅಗಲಿ 15ನೇ ವರ್ಷ ಆಗಿದೆ. ಈ ಹಿನ್ನೆಲೆ ರಾಜ್ ಕುಟುಂಬಸ್ಥರು ರಾಜ್ ಸಮಾಧಿ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಶಿವರಾಜ್ ಕುಮಾರ್ ಅವರು ಅಪ್ಪಾಜಿ ಅಗಲಿ 15 ವರ್ಷ ಆಯ್ತು. ಕಳೆದ ವರ್ಷವೂ ಕೊರೊನಾ ಇತ್ತು. ಈ ವರ್ಷವೂ ಕೊರೊನಾ ಇರುವುದರಿಂದ ಅತ್ಯಂತ ಸರಳವಾಗಿ ಪೂಜೆ ಮಾಡುತ್ತಿದ್ದೇವೆ. ಅಭಿಮಾನಿಗಳು ಹುಷಾರಾಗಿರಬೇಕು. ಯುಗಾದಿಗೆ ಮುನ್ನಾ ದಿನ ಅಪ್ಪಾಜಿ ಪುಣ್ಯಸ್ಮರಣೆಯ ದಿನ ಬಂದಿದೆ. ಇಡೀ ಕುಟಂಬ ಯುಗಾದಿ ಹಬ್ಬವನ್ನು ಆಚರಿಸುತ್ತೇವೆ. ಎಂದರು.
ಎಲ್ಲರಿಗೂ ಕುಟುಂಬ ಇದೆ. ಮಾಸ್ಕ್ ಹಾಕಿಕೊಂಡು ಓಡಾಡೋದನ್ನ ಮರೆಯಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಈಗಾಗಲೇ 1 ವರ್ಷ ಎಲ್ಲರೂ ಕಷ್ಟ ಪಟ್ಟಿದ್ದೀವಿ. ಕೊರೊನಾ ಜೊತೆಯೇ ಬದುಕಬೇಕು. ಮೊಂಡು ಧೈರ್ಯ ಮಾಡಬಾರದು. ನಮ್ಮ ಜವಾಬ್ಧಾರಿಯನ್ನು ನಾವು ನಿಭಾಯಿಸಿದ್ರೆ ಲಾಕ್ ಡೌನ್ ಮಾಡುವ ಅಗತ್ಯವಿಲ್ಲ” ಎಂದರು.
ಇನ್ನು ಸಿನಿಮಾ ಬಗ್ಗೆ ಮಾತನಾಡಿದ ಅವರು, ‘ಶಿವಪ್ಪ’ ಸಿನಿಮಾದ ಟೈಟಲ್ ಬದಲಾಗಿದೆ. ಈ ಸಿನಿಮಾಗೆ ಹೊಸ ಟೈಟಲ್ ಅನೌನ್ಸ್ ಮಾಡುತ್ತೇವೆ” ಎಂದರು.










