ಪ್ರಯಾಣಿಕರ ಮೇಲೆ ಹರಿದ ಸಿಮೆಂಟ್ ಲಾರಿ ; ಬಾಲಕಿ ಸಾವು…

83
firstsuddi

ಯಾದಗಿರಿ : ಬಸ್ ನಿಲ್ದಾಣದ ಮುಂದೆ ನಿಂತಿದ್ದ ಪ್ರಯಾಣಿಕರ ಮೇಲೆ ಸಿಮೆಂಟ್ ಲಾರಿ ಹರಿದಿದೆ. ಪರಿಣಾಮ, ಬಾಲಕಿಯ ದೇಹ ಛಿದ್ರ ಛಿದ್ರವಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಗುರುಮಿಠಕಲ್ ಸಮೀಪದ ಬೋರಬಂಡದಲ್ಲಿ ನಡೆದಿದೆ.

ಗುರುಮಠಕಲ್ ಗೆ ತೆರಳಲು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ವೇಗವಾಗಿ ಬಂದ ಸಿಮೆಂಟ್ ಲಾರಿ ಅವರ ಮೇಲೆ ನುಗ್ಗಿದೆ. ಪರಿಣಾಮ ಮೂರು ವರ್ಷದ ಬಾಲಕಿ ಮೋನಿಕಾ ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯ ದೇಹ ಛಿದ್ರ ಛಿದ್ರವಾಗಿದೆ. ಸಕಾಲದಲ್ಲಿ ಅಂಬ್ಯುಲೆನ್ಸ್ ಸಿಕ್ಕದ ಕಾರಣ 112 ಮತ್ತು ಹೈವೆ ಪ್ಯಾಟ್ರೋಲಿಂಗ್ ವಾಹನಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಗುರುಮಿಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.