ನವದೆಹಲಿ : ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ನಟ ದೀಪ್ ಸಿಧು ಅವರಿಗೆ ಇಂದು ನ್ಯಾಯಾಲಯ ಜಾಮಿನು ನೀಡಿದೆ.
ಗಣರಾಜ್ಯೋತ್ಸವ ದಿನದಂದು ಕೃಷಿಕಾನೂನು ಮತ್ತು ಎಪಿಎಂಸಿ ಕಾನೂನು ವಿರೋಧಿಸಿ ರೈತರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಮತ್ತು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜ ಹಾರಿಸಲು ಸಹಕರಿಸಿದ್ದನು. ಅಷ್ಟೇ ಅಲ್ಲದೇ ಅಲ್ಲಿಂದಲೇ ಫೇಸ್ ಬುಕ್ ಲೈವ್ ಮಾಡಿದ್ದರು. ಈ ಹಿನ್ನೆಲೆ ಫೆಬ್ರವರಿ 9 ರಂದು ಸಿಧು ಅವರನ್ನು ಪೊಲೀಸರ ವಿಶೇಷ ತಂಡ ಬಂಧಿಸಿತ್ತು.
ಪ್ರತಿಭಟನೆಗಾಗಿ ಕರೆ ನೀಡಿದ್ದು ರೈತ ಮುಖಂಡರು. ಅಲ್ಲದೇ ಸಿಧು ಅವರು ಯಾವ ರೈತ ಮುಖಂಡ ಅಥವಾ ರೈತ ಸಂಘದ ಸದಸ್ಯರಲ್ಲ. ಜನಸಮೂಹವನ್ನು ಪ್ರಚೋದಿಸಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಅವರು ಹಿಂಸಾಚಾರದಲ್ಲಿ ತೊಡಗಿಲ್ಲ ಎಂದು ದೀಪ್ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಇದೀಗ ನಟ ದೀಪ್ ಸಿಧು ಅವರಿಗೆ ಜಾಮಿನು ಸಿಕ್ಕಿದೆ.










