ರಾಜ್ಯದ ಜನತೆ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ : ಸರ್ಕಾರದ ವಿರುದ್ದ ಹೆಚ್‍ಡಿಕೆ ಕಿಡಿ…

155
firstsuddi

ಬೆಂಗಳೂರು: ಮೆಟ್ರೋ ಎರಡನೇ ಹಂತ ಮತ್ತು ಮೂರನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದಕ್ಕೆ ರಾಜ್ಯ ಸರ್ಕಾರ ಪತ್ರಿಕೆಯ ಮುಖಪುಟಗಳಲ್ಲಿ ಜಾಹೀರಾತು ನೀಡಿರುವುದಕ್ಕೆ ಹೆಚ್‍ಡಿಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಚಿಕಿತ್ಸೆಗೆ ಬೆಡ್ ಗಳಿಲ್ಲ, ಆಕ್ಸಿಜನ್ ಕೊರತೆಯಿದೆ, ಔಷಧಿ ಇಲ್ಲ, ಇದರಿಂದ ಜನ ಸಾಯುತ್ತಿದ್ದಾರೆ. ಇಂತಹ ಸೂತಕದ ಸಂದರ್ಭದಲ್ಲೂ ಕೋಟಿ ಹಣ ಖರ್ಚು ಮಾಡಿ ಕೇಂದ್ರ ಸರ್ಕಾರಕ್ಕೆ ಶುಭಾಶಯ ಕೋರುವ ಅಗತ್ಯ ಏನಿತ್ತು? ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿರುವುದು ಭಿಕ್ಷೆಯಲ್ಲ, ರಾಜ್ಯದ ಜನತೆ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಈ ಸರ್ಕಾರಕ್ಕೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಹೆಚ್‍ಡಿಕೆ ಸರ್ಹಾರದ ವಿರುದ್ದ ವಾಗ್ದಾಳಿ ನಡೆಸಿದರು.