ಕಳಸ : ದಕ್ಷಿಣ ಕಾಶಿ ಕಲಶೇಶ್ವರ ದೇವಸ್ಥಾನದಲ್ಲಿ ಸಪ್ತಪದಿ ಕಾರ್ಯಕ್ರಮ…

270

ಕಳಸ : ಮುಜರಾಯಿ ದೇವಾಲಯಗಳಲ್ಲಿ ಕೊರೊನಾದ ಕಾರಣದಿಂದಾಗಿ ವಿಳಂಬವಾಗಿದ್ದ ಸಪ್ತಪದಿ ಕಾರ್ಯಕ್ರಮ ದಕ್ಷಿಣ ಕಾಶಿ ಕಲಶೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ನಡೆಯಿತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಥಮ ವಿವಾಹ ಕಾರ್ಯಕ್ರಮವಾಗಿದ್ದು, ಈ ಯೋಜನೆಯಡಿಯಲ್ಲಿ ಕೊಟ್ಟಿಗೆಹಾರದ ಶರತ್ ಬಿ.ಬಿ, ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿಯ ಕೌಸಲ್ಯ ಮತ್ತು ಕಡೂರು ತಾಲ್ಲೂಕಿನ ಎಂ.ಕೆ.ಶ್ರೀನಿವಾಸ, ಕಡೂರು ತಾಲ್ಲೂಕಿನ ಕೆ.ಎನ್.ಪೂಜಾ ಈ ಎರಡು ಜೋಡಿಗಳು ಸಪ್ತಪದಿ ತುಳಿದರು.

ಕೊರೊನಾದ ಹಿನ್ನಲೆಯಲ್ಲಿ ಮದುವೆಯಲ್ಲಿ ಕೇವಲ 50 ಜನರಿಗೆ ಮಾತ್ರ ನಿಗದಿ ಪಡಿಸಲಾಗಿತ್ತು. ಬೆಳಿಗ್ಗೆ 11.45 ರಿಂದ 12.45ರ ಒಳಗೆ ಅಭಿಜಿನ್ ಮುಹೂರ್ತದಲ್ಲಿ ಕಲಶೇಶ್ವರ ದೇವಸ್ಥಾನದ ಪುರೋಹಿತರಾದ ಐತಾಳ್ ಭಟ್ ಹಿಂದೂ ಧರ್ಮದ ಸಾಂಪ್ರಾದಾಯ ಪ್ರಕಾರ ಮದುವೆ ಕಾರ್ಯವನ್ನು ನಡೆಸಿಕೊಟ್ಟರು.

ಪುರೋಹಿತರ ಮಾಂಗಲ್ಯ ಮಂತ್ರ ಪಠಣ ಮಂಗಳವಾದ್ಯಗಳೊಂದಿಗೆ ವದು ವರರು ಹಾರ ಬದಾಯಿಸಿಕೊಂಡರು. ವದುವಿನ ಕಡೆಯವರು ಹೆಣ್ಣನ್ನು ದಾರೆ ಎರೆದ ನಂತರದಲ್ಲಿ ವರ ಹೆಣ್ಣಿನ ಕುತ್ತಿಗೆಗೆ ತಾಳಿ ಕಟ್ಟಿ ನಂತರ ಸಪ್ತಪದಿ ತುಳಿದು, ಅರುಂದತಿ ನಕ್ಷತ್ರ ತೋರಿಸುವ ಮೂಲಕ ಕ್ರಮ ಬದ್ಧವಾಗಿ ಅತ್ಯಂತ ಸರಳವಾಗಿ ಮದುವೆ ಕಾರ್ಯ ಮುಕ್ತಾಯವಾಯಿತು.

ವದುವಿಗೆ ಸರ್ಕಾರದ ವತಿಯಿಂದ 40 ಸಾವಿರ ರೂ ಮೌಲ್ಯದ ತಾಳಿ ಗುಂಡು ಮತ್ತು ಹೂವಿನ ಹಾರ, ಧಾರೆ ಸೀರೆ ಮತ್ತು ರವಿ ಕಣಕ್ಕಾಗಿ 10 ಸಾವಿರ, ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5 ಸಾವಿರ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯೆ ಅನ್ನಪೂರ್ಣ, ದೇವಸ್ಥಾನದ ಕಾರ್ಯನಿರ್ವಹಣಾಧಿಕರಿ ಎಸ್.ಪ್ರೇಮ, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ದೇವಸ್ಥಾನದ ಸಿಬ್ಬಂದಿಗಳಾದ ಅನುಸೂಯ, ಸತೀಶ್ ಸಪ್ತಪದಿ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.