ಹುಟ್ಟುರಾದ ಕೊಡಿಗೆಹಳ್ಳಿಯಲ್ಲಿ ನಿರ್ಮಾಪಕ ಕೋಟಿ ರಾಮು ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ…

200
firstsuddi

ಬೆಂಗಳೂರು : ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಕೋಟಿ ನಿರ್ಮಾಪಕ ಎಂದೇ ಕರೆಯಿಸಿಕೊಂಡಿದ್ದ ರಾಮು, ನಟಿ ಮಾಲಾಶ್ರೀ ಪತಿ ರಾಮು ಅವರಿಗೆ ಕೊರೊನಾ ಸೋಂಕು ತಗುಲಿತ್ತು. ರಾಮು ಅವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ.  ರಾಮು ಅವರನ್ನು ಕಳೆದುಕೊಂಡು ಪತ್ನಿ ಮಾಲಾಶ್ರೀ ಸೇರಿದಂತೆ ಇಡೀ ಕುಟುಂಬ ದುಖಃದಲ್ಲಿದೆ.

ರಾಮು ಅವರ ಹುಟ್ಟೂರಾದ ಕುಣಿಗಲ್ ಸಮೀಪದಲ್ಲಿರುವ ಕೊಡಿಗೆಹಳ್ಳಿಯ ತೋಟದಲ್ಲಿ ಇಂದು ಮಧ್ಯಾಹ್ನ 12.30ರ ಸುಮಾರಿಗೆ ನಿರ್ಮಾಪಕ ರಾಮು ಅವರ ಅಂತ್ಯ ಸಂಸ್ಕಾರ ನೆರೆವೇರಿಸಲು ಕುಟುಂಬ ವರ್ಗ ತೀರ್ಮಾನಿಸಿದ್ದು, ಈಗಾಗಲೇ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆದಿದೆ.