ನನ್ನ ದೇಶ ಸಂಕಷ್ಟದಲ್ಲಿದೆ, ಲಸಿಕೆ ನೀಡಿ : ನಟಿ ಪ್ರಿಯಾಂಕಾ ಚೋಪ್ರಾ ಮನವಿ…

120
firstsuddi

ಕೊರೊನಾ ವೈರಸ್ ನಿಂದ ನನ್ನ ದೇಶ ಸಂಕಷ್ಟದಲ್ಲಿದೆ, ತುರ್ತಾಗಿ ಲಸಿಕೆ ನೀಡಿ ಎಂದು ಇತರ ದೇಶಗಳಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು, ದೇಶದ ಸ್ಥಿತಿ ನೋಡಿ ನನ್ನ ಹೃದಯ ಛಿದ್ರವಾಗುತ್ತಿದೆ. ಮಹಾಮಾರಿ ಕೊರೊನಾದ 2ನೇ ಅಲೆಯಿಂದ ನನ್ನ ಭಾರತ ಗಂಡಾಂತರದಲ್ಲಿ ಸಿಲುಕಿದೆ. ಜನರು ತತ್ತರಿಸಿ ಹೋಗಿದ್ದಾರೆ ಜಗತ್ತಿನಾದ್ಯಂತ ಆಸ್ಟ್ರಾಜೆನೆಕಾ ಲಸಿಕೆ ಹಂಚಿಕೆ ಮಾಡಿದ್ದಕ್ಕೆ ಧನ್ಯವಾದಗಳು. ಆದರೆ ನನ್ನ ದೇಶ ಭಾರತದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ.. ಭಾರತಕ್ಕೆ ತುರ್ತಾಗಿ ಲಸಿಕೆ ಬೇಕಾಗಿದೆ. ಹಾಗಾಗಿ ಭಾರತಕ್ಕೆ ತುರ್ತಾಗಿ ಲಸಿಕೆ ನೀಡುತ್ತೀರಾ? ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಮತ್ತು ಇತರ ಉನ್ನತ ಅಧಿಕಾರಿಗಳಿಗೆ ನಟಿ ಪ್ರಿಯಾಂಕ ಅವರು ಪ್ರಶ್ನೆ ಮಾಡಿದ್ದಾರೆ.

ಭಾರತದ ಪರಿಸ್ಥಿತಿ ಕಂಡು ಸಾಮಾಜಿಕ ಜಾಲತಾಣದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು ಮನವಿ ಮಾಡಿಕೊಂಡಿರುವುದಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದೆ.