ಸಾಯುವುದೇ ಒಳ್ಳೆಯದು ಎಂಬ ಉಮೇಶ್ ಕತ್ತಿಯವರ ಹೇಳಿಕೆಗೆ ಬಿಎಸ್‍ವೈ ವಿಷಾದ…

127
firstsuddi

ಬೆಂಗಳೂರು : ಆಹಾರ ಸಚಿವ ಉಮೇಶ್ ಕತ್ತಿಯವರಿಗೆ ಕರೆ ಮಾಡಿದ್ದ ರೈತರೊಬ್ಬರಿಗೆ ಸಾಯುವುದು ಒಳ್ಳೆಯದು ಎಂದು ಉಡಾಫೆ ಉತ್ತರ ನೀಡಿದ್ದರು.ಈ ಹೇಳಿಕೆಗೆ ಸಿಎಂ ಯಡಿಯೂರಪ್ಪನವರು ವಿಷಾದ ವ್ಯಕ್ತಪಡಿಸಿದ್ದಾರೆ.

ರೈತನೊಬ್ಬ 5 ಕೆ.ಜಿ. ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದರಿಂದ ಕಷ್ಟವಾಗುತ್ತಿದೆ. ಲಾಕ್ ಡೌನ್ ನಲ್ಲಿ ಸಾಯಬೇಕಾ ಬದುಕಬೇಕಾ ಎಂದು ರೈತ ಕೇಳಿದ್ದಕ್ಕೆ ಸಾಯುವುದು ಒಳ್ಳೆಯದು, ಮತ್ತೆ ಕರೆ ಮಾಡಬೇಡಿ ಎಂದು ಸಚಿವರು ಹೇಳಿರುವುದು ಒಬ್ಬ ಸಚಿವನಾಗಿ ಸರಿಯಲ್ಲ. ಆ ಭಾಗದಲ್ಲಿರುವ ಜನರಿಗೆ ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿಯನ್ನು ಕೊಡಲು ವ್ಯವಸ್ಥೆ ಮಾಡಲಾಗುವುದು. ಉಮೇಶ್ ಕತ್ತಿ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಇನ್ನೂ ಉಮೇಶ್ ಕತ್ತಿ ಅವರ ಉಡಾಫೆಯ ಹೇಳಿಕೆಗೆ ಎಲ್ಲೆಡೆಯಿಂದ ಜನರ ಆಕ್ರೋಶ ವ್ಯಕ್ತವಾಗಿದೆ.