ಜನತಾ ಕರ್ಫ್ಯೂ ನಿರೀಕ್ಷಿತ ಫಲ ನೀಡಿಲ್ಲ, ಕೊರೊನಾ ಚೈನ್ ಲಿಂಕ್ ತುಂಡರಿಸಬೇಕಾದರೆ ಲಾಕ್ ಡೌನ್ ಅನಿವಾರ್ಯ…

112
firstsuddi

ಚಾಮರಾಜನಗರ : ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು, ಜನತಾ ಕರ್ಫ್ಯೂ ನಿರೀಕ್ಷಿತ ಫಲ ನೀಡಿಲ್ಲ. ಕೊರೊನಾ ಚೈನ್ ಲಿಂಕ್ ತುಂಡರಿಸಬೇಕಾದರೆ ಲಾಕ್ ಡೌನ್ ಅನಿವಾರ್ಯ. ಕ್ಲೋಸ್ ಡೌನ್ ನಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಾಗಿ ಲಾಕ್ ಡೌನ್ ಜಾರಿಯಾಗಬೇಕೆಂದು ಎಲ್ಲರೂ ಹೇಳುತ್ತಿದ್ದಾರೆ. ಇಂದು ಸಂಜೆ ಸಿಎಂ ಯಡಿಯೂರಪ್ಪನವರು ಸಭೆ ಕರೆಯುತ್ತಿದ್ದಾರೆ. ಒಂದೆರೆಡು ದಿನಗಳಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಕಂಪ್ಲೀಟ್ ಲಾಕ್ ಡೌನ್ ಪರಿಹಾರವಾದರೂ ಆದರಿಂದ ಆಗುವ ಸಾಧಕ, ಬಾಧಕಗಳನ್ನು ಚರ್ಚಿಸಬೇಕಿದೆ. ದುಡಿಮೆಯನ್ನೇ ನಂಬಿರುವವರ ಬಗ್ಗೆಯೂ ಯೋಚಿಸಬೇಕಿದೆ. ಬೇರೆ ಜಿಲ್ಲೆಗಳಲ್ಲಿ ಈಗ ಲಾಕ್ ಡೌನ್ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯ ಸ್ಥಿತಿ, ಅಂಕಿ-ಸಂಖ್ಯೆಗಳನ್ನು ಸಿಎಂ ಅವರಿಗೆ ತಿಳಿಸುತ್ತೇನೆ. ಕಳೆದ 24 ಗಂಟೆಗಳಲ್ಲಿ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 6 ಮಂದಿ ಕೊರೊನಾ ಸೋಂಕಿತರು ಹಾಗೂ ಇಬ್ಬರು ಕೊರೊನಾ ಲಕ್ಷಣಗಳಿರುವ ವ್ಯಕ್ತಿಗಳು ಸಾವವನ್ನಪ್ಪಿದ್ದಾರೆ.ವೆಂಟಿಲೇಟರ್ ನಲ್ಲಿರುವ 26 ಮಂದಿ ವರದಿ ನೋಡಿದೆ. ವೆಂಟಿಲೇಟರ್ನಲ್ಲಿದ್ದರೂ ಕೆಲವರ ಆಮ್ಲಜನಕದ ಮಟ್ಟ 60,70,80 ಇದೆ. ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿ. ಕೊರೊನಾ ಬಂದಾಗ ಆತಂಕ ಪಡದೆ ಆತ್ಮಸ್ಥೈರ್ಯ ಇರಲಿ ಜಿಲ್ಲೆಯ ಜನರಿಗೆ ಮನವಿ ಮಾಡಿದರು.

ಸದ್ಯ ನಮ್ಮಲ್ಲಿ 200 ಜಂಬೋ ಸಿಲಿಂಡರ್, 700ಲೀ. ಲಿಕ್ವಿಡ್ ಆಕ್ಸಿಜನ್ ಇದೆ. 100 ಸಿಲಿಂಡರ್ ಮಧ್ಯಾಹ್ನದವರೆಗೆ ಬರಲಿದೆ. ಕೆಲ ಎಂಜಿನಿಯರ್ ತಂಡ ಬರಲಿದ್ದು, ಆಮ್ಲಜನಕ ಪ್ಲಾಂಟ್ ಕೂಡ ಚೆಕ್ ಮಾಡಲಿದ್ದಾರೆ. ಸಚಿವ ಸುಧಾಕರ್ ಭರವಸೆ ಕೊಟ್ಟಂತೆ 7 ಸಾವಿರ ಲೀ. ಲಿಕ್ವಿಡ್ ಆಕ್ಸಿಜನ್ ನಮಗೆ ಕೊಡಬೇಕೆಂದು ನೋಡಲ್ ಅಧಿಕಾರಿಗೆ ಸೂಚಿಸಿರುವುದಾಗಿ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.