ಮೂಡಿಗೆರೆ : ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ…

99
firstsuddi

ಮೂಡಿಗೆರೆ : ದೇಶಾದ್ಯಂತ ಕೊರೊನಾ ಮಹಾಮಾರಿಯಿಂದಾಗಿ ಸರ್ಕಾರದ ಆದೇಶದಂತೆ ಲಾಕ್ ಡೌನ್ ಜಾರಿಮಾಡಲಾಗಿತ್ತು. ಇದೀಗ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಜುಲೈ 5ರಿಂದ ದೇವಾಲಯಗಳನ್ನು ತೆರೆಯಲು ಅವಕಾಶ ನೀಡಿದ್ದು, ಈ ಹಿನ್ನಲೆ ಇಂದು ಮೂಡಿಗೆರೆ ಬೇಲೂರು ರಸ್ತೆಯಲ್ಲಿರುವ ಈಶ್ವರ ದೇವಾಲಯವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಸ್ವಚ್ಛಗೊಳಿಸಲಾಯಿತು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಜರಂಗದಳ ತಾಲ್ಲೂಕು ಸಂಯೋಜಕ ವಿನಯ್ ಶೆಟ್ಟಿ, ಸಹ ಸಂಚಾಲಕ ಅಜಿತ್ ಜೇನ್ ಬೈಲ್, ನಗರ ಸಂಚಾಲಕ ಮಧು, ದೀಕ್ಷಿತ್ ಕೊಟ್ಟಿಗೆಹಾರ, ಅಂಜನ್, ಸಂತೋಷ್ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗಿಯಾಗಿದ್ದರು.