ಆಸ್ಪತ್ರೆಯಿಂದ ವಿಚಾರಣಾಧೀನ ಕೈದಿ ಎಸ್ಕೇಪ್…

79
firstsuddi

ಕಲಬುರಗಿ : ನಗರದ ಜಿಮ್ಸ್ ಆಸ್ಪತ್ರೆಯ ಜೈಲ್ ವಾರ್ಡ್ ನ ಕಿಟಕಿಯಿಂದ ಜಿಗಿದು ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾಗಿದ್ದಾನೆ.

ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಅಲ್ಲೂರು ಬಿ ಗ್ರಾಮದ ನಿವಾಸಿಯಾದ ಸಿದ್ದಪ್ಪ ಅಲ್ಲೂರ್ (22) ಪರಾರಿಯಾದ ವಿಚಾರಣಾಧೀನ ಕೈದಿ. ಎರಡು ತಿಂಗಳ ಹಿಂದೆ ತನ್ನ ಸ್ನೇಹಿತನನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ. ಅಸಹಜ ವರ್ತನೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಜಿಮ್ಸ್ ಆಸ್ಪತ್ರೆಯ ಜೈಲ್ ವಾರ್ಡ್ಗೆ ಈತನನ್ನು ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಸಿದ್ದಪ್ಪ ಪರಾರಿಯಾಗಿದ್ದಾನೆ.

ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.