ಚಿಕ್ಕಮಗಳೂರು : ದನದ ಕೊಟ್ಟಿಗೆ ಕುಸಿದು ವೃದ್ಧ ಸಾವು, ಮೊಮ್ಮಗ ಪಾರು…

114
firstsuddi

ಚಿಕ್ಕಮಗಳೂರು : ದನದ ಕೊಟ್ಟಿಗೆ ಕುಸಿದು ವೃದ್ಧನೋರ್ವ ಸಾವನಪ್ಪಿರುವ ಘಟನೆ ತಾಲ್ಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ನಡೆದಿದೆ.
ಬಸವೇಗೌಡ (65) ಮೃತ ದುರ್ದೈವಿ. ಹಸುಗಳಿಗೆ ಮೇವು ಹಾಕಲು ತೆರಳಿದ್ದ ವೇಳೆ ಏಕಾಏಕಿ ಕೊಟ್ಟಿಗೆ ಕುಸಿದಿದೆ. ಪರಿಣಾಮ ಮಣ್ಣಿನ ಗೋಡೆ ಅಡಿ ಸಿಲುಕಿ ಬಸವೇಗೌಡ ಸಾವನ್ನಪ್ಪಿದ್ದು, ಹಸು ಕೂಡ ಪ್ರಾಣ ಬಿಟ್ಟಿದೆ. ಈ ವೇಳೆ ಅಜ್ಜನ ಜೊತೆಗಿದ್ದ ಮೊಮ್ಮಗ ರಮೇಶ್ ಪಾರಾಗಿದ್ದಾನೆ.

ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮಣ್ಣಿನಡಿ ಸಿಲುಕಿದ್ದ ಶವವನ್ನು ಹೊರತೆಗೆದಿದ್ದಾರೆ.