ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3.50ಲಕ್ಷ ಕ್ಯೂಸೆಕ್ ನೀರು ಬಿಡುಗಡೆ : ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಭೀತಿ…

112
firstsuddi

ಯಾದಗಿರಿ : ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಸವಸಾಗರ(ನಾರಾಯಣಪುರ) ಜಲಾಶಯ ಭರ್ತಿಯಾಗಿದ್ದು, 3.50 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಪರಿಣಾಮ ನದಿ ಪಾತ್ರದ ಪ್ರದೇಶಗಳಾದ ಲಿಂಗಸುಗೂರು, ದೇವದುರ್ಗ, ರಾಯಚೂರು ತಾಲ್ಲೂಕುಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಇಂದು ಬೆಳಗ್ಗೆ ಜಲಾಶಯದಿಂದ 3.5 ಲಕ್ಷ ಕೂಸೆಕ್ ನೀರನ್ನು ಕ್ರಸ್ಟ್ ಗೇಟ್ಗಳ ಮೂಲಕ ಕೃಷ್ಣಾ ನದಿಗೆ ಹರಿಸಲಾಗಿದ್ದು, ಇದರ ಪರಿಣಾಮ ಎಂ ಕೊಳ್ಳೂರು ಬ್ರಿಡ್ಜ್ ಜಲಾವೃತಗೊಂಡು ರಾಯಚೂರು, ಯಾದಗಿರಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಜಲಾಶಯದಿಂದ ನೀರು ಹರಿ ಬಿಟ್ಟಿರುವ ಹಿನ್ನೆಲೆ ಜನ, ಜಾನುವಾರು ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.