ಚಿಕ್ಕಮಗಳೂರು : ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಜೊತೆಗೆ ಸಂಸ್ಕಾರವಂತರನ್ನಾಗಿಯೂ ರೂಪಿಸಬೇಕು : ಶ್ರೀ ಡಾ|| ಬಸವ ಮರುಳಸಿದ್ದ ಸ್ವಾಮೀಜಿ.

123
firstsuddi

ಚಿಕ್ಕಮಗಳೂರು : ಪೋಷಕರು ತಮ್ಮ ಮಕ್ಕಳನ್ನು ಬುದ್ದಿವಂತರು ಮತ್ತು ವಿದ್ಯಾವಂತರನ್ನಾಗಿ ಮಾಡುವುದರ ಜೊತೆಗೆ ಅವರನ್ನು ಸಂಸ್ಕಾರವಂತರನ್ನಾಗಿಯೂ ರೂಪಿಸಬೇಕು ಎಂದು ವಿರಕ್ತ ಮಠ ಬಸವ ಮಂದಿರದ ಶ್ರೀ ಡಾ|| ಬಸವ ಮರುಳಸಿದ್ದ ಸ್ವಾಮೀಜಿ ಸಲಹೆ ಮಾಡಿದರು.

ನಗರದ ವಿರಕ್ತ ಮಠ ಬಸವ ಮಂದಿರದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿಜೇತರಾದ ಕಲ್ಯಾಣ ನಗರದ ಐಪಿಎ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಆರ್ಶೀವಚನ ನೀಡಿದರು.
ಇತ್ತೀಚಿನ ವರ್ಷಗಳಲ್ಲಿ ದೇಶ ಸಾಕ್ಷರತೆಯಲ್ಲಿ ಬಹಳಷ್ಟು ಮುಂದಿದೆ. ನಮ್ಮ ಮಕ್ಕಳು ಬುದ್ದಿವಂತರು ಮತ್ತು ವಿದ್ಯಾವಂತರಾಗಿ ರೂಪುಗೊಳ್ಳುತ್ತಿದ್ದಾರೆ. ಆದರೆ ಸುಸಂಸ್ಕøತರಾಗುವಲ್ಲಿ ವಿಪಲರಾಗಿದ್ದಾರೆ ಇದರಿಂದಾಗಿ ರಾಷ್ಟ್ರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿಷಾಧಿಸಿದರು.

ಮಕ್ಕಳು ನಾವು ಹೇಳಿದ್ದನ್ನು ಕಲಿಯುವುದಕ್ಕೆ ಬದಲಾಗಿ ನಾವು ಮಾಡಿದ್ದನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ಪೋಷಕರು ಆಚಾರ ಮತ್ತು ವಿಚಾರವಂತರಾಗಿ ಸುಸಂಸ್ಕøತರಾಗಿ ನಡೆದು ಕೊಳ್ಳಬೇಕು. ಹಾಗಾದಾಗ ಮಾತ್ರ ಮಕ್ಕಳು ಅವರನ್ನು ನೋಡಿ ತಾವೂ ಸಂಸ್ಕøತರಾಗುತ್ತಾರೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜಿಎಸ್ ಕಾಲೇಜಿನ ಪ್ರಾಚಾರ್ಯ ಜೆ.ಜಿ.ಸುರೇಂದ್ರ ಆತ್ಮವಿಶ್ವಾಸ, ಶ್ರದ್ದೆ, ಛಲ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿದರೆ ಮಾತ್ರ ಸಾಧಕರಾಗಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಐಡಿಯಲ್ ಪ್ಲೇ ಅಬಾಕಸ್ ಅಕಾಡೆಮಿಯ ವ್ಯವಸ್ಥಾಪಕಿ ಪವಿತ್ರಾ ದಿನೇಶ್ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಸಮಾರಂಭದ ನಡುವೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು. ಶೃತಿ ಕಿರಣ್, ಎನ್.ಎಲ್.ದಿವ್ಯ, ತನ್ಮಯಿ, ಶೋಧನ್, ಕವಿತಾ ದಿನೇಶ್ ಉಪಸ್ಥಿತರಿದ್ದರು.