ಬಿಗ್ ಬಾಸ್ ಸೀಸನ್ 8ರ ವಿಜೇತರಾಗಿ ಹೊರಹೊಮ್ಮಿದ ಮಂಜು ಪಾವಗಡ!

108
firstsuddi

ಬಿಗ್ ಬಾಸ್ ಸೀಸನ್ 8ರ ವಿಜೇತರಾಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ವಿನ್ನರ್ ಎಂಬ ಪಟ್ಟದ ಜೊತೆಗೆ ಮಂಜು ಪಾವಗಡ 53 ಲಕ್ಷ ರೂಪಾಯಿ ಬಹುಮಾನವನ್ನು ಕೂಡ ಪಡೆದಿದ್ದಾರೆ. ಬೈಕರ್ ಕೆ. ಪಿ. ಅರವಿಂದ್ ರನ್ನರ್ ಅಪ್ ಆದರೆ, ದಿವ್ಯಾ ಉರುಡುಗ 3ನೇ ಸ್ಥಾನ ಪಡೆದಿದ್ದಾರೆ.

ಹಾಸ್ಯದ ಮೂಲಕ ಮಂಜು ಪಾವಗಡ ಪ್ರತಿಭೆಯನ್ನು ಹೊರ ಹಾಕಿದ್ದರು. ಬಿಗ್ ಬಾಸ್ ಮನೆಯಲ್ಲಿ ನಡೆದ ಟಾಸ್ಕ್ ಗಳಲ್ಲಿ ಮಂಜು ಪಾವಗಡ ಅತ್ಯುತ್ತಮ ಪ್ರದರ್ಶನ ನೀಡಿದರು. ಅಲ್ಲದೆ ಕ್ಯಾಪ್ಟನ್ ಆಗಿಯೂ ಕೂಡ ಅವರ ನಾಯಕತ್ವ ಎಲ್ಲರಿಗೂ ಇಷ್ಟವಾಗಿತ್ತು. ಆದರೆ, ಮೊದಲ ಇನ್ನಿಂಗ್ಸ್ ನಲ್ಲಿ ದಿವ್ಯಾ ಸುರೇಶ್ ಅವರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ ಮಂಜು, ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕೇವಲ ಆಟದ ಕಡೆ ಗಮನ ಹರಿಸಿದ್ದರು. ಹೀಗಾಗಿ, ಮಂಜು ಅವರು ವೈಯಕ್ತಿಕವಾಗಿ ಹಾಗೂ ಸ್ವತಂತ್ರವಾಗಿ ತಮ್ಮ ಆಟವನ್ನು ಬಿಗ್ ಬಾಸ್ ಮನೆಯಲ್ಲಿ ಕೊನೆಯ ದಿನದವರೆಗೂ ನಡೆಸಿದ್ದಾರೆ. ಇವರಿಗೆ ಮೊದಲಿನಿಂದಲೂ ಅರವಿಂದ್ ಹಾಗೂ ದಿವ್ಯಾ ಉರುಡುಗ ಟಫ್ ಕಾಂಪಿಟೇಟರ್ ಆಗಿದ್ದರು. ಆದರೂ ಯಾವುದನ್ನು ತಲೆಗೆ ಹಾಕಿಕೊಳ್ಳದೇ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಮಂಜು ಪಾವಗಡ ವಿಜಯ ಪತಾಕೆ ಹಾರಿಸಿದ್ದಾರೆ.