ಆನ್ ಲೈನ್ ಕಲಿಕೆಗಾಗಿ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಹೊಸ ಆ್ಯಪ್…

78
firstsuddi

ಆನ್ ಲೈನ್ ಮೂಲಕ ಕ್ಲಾಸ್ ಮಾಡುವ ವಿಧಾನ, ಬಹುತೇಕ ಮಕ್ಕಳಿಗೆ ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗಿ ಕಿರಿಕಿರಿ ಅನುಭವಿಸುತ್ತಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಆನ್ ಲೈನ್ ಕಲಿಕೆಗೆ ಹೊಸ ಆ್ಯಪ್ ತಯಾರಿಸಿದ್ದಾರೆ. ಅದುವೇ ಡಾರ್ಕ್ ಬೋರ್ಡ್ ಆನಿಮೇಷನ್ ಎಜುಕೇಷನ್. ಆ ಆ್ಯಪ್ ಬಳಸಿ ಆನ್ ಲೈನ್ ಕ್ಲಾಸ್ ಮಾಡಬಹುದು. ಈ ಹೊಸ ಆ್ಯಪ್​ ನಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಈಗ ಆನ್ ಲೈನ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಬೆನ್ನು ನೋಡಿಕೊಂಡು ಪಾಠ ಕೇಳುತ್ತಿದ್ದಾರೆ. ಆದರೆ ಈ ಡಾರ್ಕ್ ಬೋರ್ಡ್ ಕ್ಲಾಸ್ ನಲ್ಲಿ ಪಾಠ ಕೇಳಿದ್ರೆ ಶಿಕ್ಷಕರ ಹಾವ, ಭಾವವನ್ನು ನೋಡಿ ವಿದ್ಯೆ ಕಲಿಯಬಹುದು. ಇದರಿಂದ ಮಕ್ಕಳಿಗೆ ತಕ್ಷಣ ಪಾಠ ತಲೆಗೆ ಹೋಗುತ್ತೆ. ಈ ಆ್ಯಪ್ ಅನ್ನು ಎಲ್ಲಾ ಸರ್ಕಾರಿ ಶಾಲೆ, ಖಾಸಗಿ ಶಾಲೆಯವರು ಬಳಸಿಕೊಳ್ಳಬಹುದಾಗಿದೆ. ಇನ್ನು ಯಾವುದೇ ವಿಷಯದ ಮೇಲೆ ಪಾಠ ಮಾಡಿ ರೆಕಾರ್ಡ್ ಮಾಡಿ ಕೂಡ ವಿದ್ಯಾರ್ಥಿಗಳಿಗೆ ಕಳುಹಿಸಬಹುದು. ಈ ಡಾರ್ಕ್ ಬೋರ್ಡ್ ಪಾಠ ಕೇಳಿದ್ರೆ ಮಕ್ಕಳು ಶಿಕ್ಷಕರ ಮುಂದೆ ಕೂತು ಪಾಠ ಕೇಳಿದ ಹಾಗಿರುತ್ತೆ.

ರಾಜ್ಯ ಸರ್ಕಾರಕ್ಕೂ ಈ ಆ್ಯಪ್ ಬಗ್ಗೆ ಮನವರಿಕೆ ಮಾಡಿ ಕೊಡಲು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮುಂದಾಗಿದ್ದು, ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಈ ಡಾರ್ಕ್ ಬೋರ್ಡ್ ಕ್ಲಾಸ್ ಬಗ್ಗೆ ತಿಳಿಸಲಿದ್ದಾರೆ.

ಸದ್ಯ ಸುದೀಪ್ ದತ್ತು ಪಡೆದ ಶಾಲೆಗಳಲ್ಲಿ ಈ ಡಾರ್ಕ್ ಬೋರ್ಡ್ ಆ್ಯಪ್ ಬಳಕೆ ಮಾಡಲಾಗುತ್ತೆ. ಡಾರ್ಕ್ ಬೋರ್ಡ್ ಕ್ಲಾಸ್ ಅನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವ ಹಾಗೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ರಮೇಶ್ ಕಿಟ್ಟಿ ಅವರು ಹೇಳಿದ್ದಾರೆ.