ಪತಿ ರಾಜ್ ಕುಂದ್ರಾರಿಂದ ಬೇರೆಯಾಗಲು ನಿರ್ಧರಿಸಿದ್ರಾ ಶಿಲ್ಪಾ ಶೆಟ್ಟಿ?

126
firstsuddi

ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತನ್ನ ಪತಿ ರಾಜ್ ಕುಂದ್ರಾರಿಂದ ಬೇರೆ ಆಗಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ತಿಂಗಳು ವಿಚಾರಣೆ ವೇಳೆ ಆ ಮೊಬೈಲ್ ಆ್ಯಪ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಪತಿ ನಿರಪರಾಧಿ, ಎಂದು ಮುಂಬೈ ಕ್ರೈಂ ಬ್ರಾಂಚ್ ಬಳಿ ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ರು. ಆದರೆ, ಈಗ ಕುಂದ್ರಾರ ಒಂದು ಪೈಸೆಯನ್ನೂ ಮುಟ್ಟದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು, ಶಿಲ್ಪಾ-ರಾಜ್ ಮಗ ವಿಯಾನ್ ರಾಜ್ ಕುಂದ್ರಾ ಮತ್ತು ಮಗಳು ಶಮೀಶಾ ಕುಂದ್ರಾ ಈಗಿನ್ನೂ ಸಣ್ಣವರು. ಮುಂದೆ ಅವರ ಭವಿಷ್ಯ ಉತ್ತಮವಾಗಿರಬೇಕು ಎಂದಾದರೆ, ಪತಿಯಿಂದ ದೂರ ಉಳಿಯಲೇಬೇಕಾದ ಅನಿವಾರ್ಯತೆ ಶಿಲ್ಪಾಗೆ ಎದುರಾಗಿದೆ ಎನ್ನುತ್ತಿವೆ ಮೂಲಗಳು.

ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ರಾಜ್ ಕುಂದ್ರಾ ಸದ್ಯ ಜೈಲಿನಲ್ಲಿದ್ದಾರೆ. ಮೊನ್ನೆಯಷ್ಟೇ ಈ ನಟಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಜೀವನದಲ್ಲಿ ಮಾಡುವ ತಪ್ಪುಗಳಿಂದ ಕಲಿಯುವ ಬಗ್ಗೆ ಬರೆದ ಟಿಪ್ಪಣಿಯೊಂದನ್ನು ಹಂಚಿಕೊಂಡಿದ್ದರು.