ಬಳ್ಳಾರಿ : ಮೊಸಳೆ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ನಿಟ್ಟೂರು ಗ್ರಾಮದ ರೈತ ವೀರೇಶ್ (38) ಎಂದು ಗುರುತಿಸಲಾಗಿದೆ. ದನ ಮೇಯಿಸಲು ನದಿ ತೀರಕ್ಕೆ ಹೋಗಿದ್ದಾಗ ಏಕಾಏಕಿ ಬಂದ ಮೊಸಳೆ ವೀರೇಶ್ ತೊಡೆ ಭಾಗಕ್ಕೆ ಕಚ್ಚಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ತೆಕ್ಕಲಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪದೇ ಪದೇ ಸಿರುಗುಪ್ಪ ಭಾಗದಲ್ಲಿ ಮೊಸಳೆ ದಾಳಿ ನಡೆಯುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ನದಿ ಪಾತ್ರದಲ್ಲಿ ಎಚ್ಚರಿಕೆಯ ನಾಮಪಲಕ ಹಾಕಿಲ್ಲ ಎಂದು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.










