ನನ್ನನ್ನು ಬ್ಲಾಕ್ ಮೇಲ್ ಮಾಡಿ ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ : ಸಾ.ರಾ.ಮಹೇಶ್.

67
firstsuddi

ಮೈಸೂರು : ನನ್ನನ್ನು ಬ್ಲಾಕ್ ಮೇಲ್ ಮಾಡಿ ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಧಿಕಾರಿಗಳ ವಿರುದ್ಧ ಶಾಸಕ ಸಾ.ರಾ. ಮಹೇಶ್ ಅವರು ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಯಾವುದಕ್ಕೂ ಹೆದರುವುದಿಲ್ಲ. ನನ್ನನ್ನು ಯಾರೂ ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ. ಸರ್ವೆಗೆ ನನ್ನ ಸ್ವಾಗತವಿದೆ. ಸರ್ವೆಗೆ ಆಯುಕ್ತರೇ ಬರಲಿ. ಚೌಟ್ರಿಯನ್ನು ನಾನೇ ಟ್ರ್ಯಾಲಿ ಹಾಕಿ ಹಿಂದೆ ಮುಂದೆ ಸರಿಸೋಕೆ ಆಗಲ್ಲ. ಈಗಾಗಲೇ ಸರ್ವೇ ಆಗಿರುವ ಜಾಗವನ್ನು ಭೂ ಮಾಪನ ಇಲಾಖೆಯ ಆಯುಕ್ತ ಮನೀಶ್ ಮೌದ್ಗಿಲ್ ಮತ್ತೆ ಸರ್ವೇಗೆ ಆದೇಶ ಮಾಡಿರುವುದು ಸರಿಯಲ್ಲ. ಶಿಷ್ಯೆ ಮಾತನ್ನು ಕೇಳಿ ಈ ರೀತಿ ಮಾಡಿದ್ದಾರೆ. ಬೆಂಗಳೂರಿನಲ್ಲಿ 8 ವರ್ಷದಿಂದ ಎಷ್ಟು ಗೋಮಾಳಗಳನ್ನು, ಸರ್ಕಾರಿ ಜಾಗಗಳನ್ನು ಒತ್ತುವರಿ ಸರ್ವೇ ಮಾಡಿದ್ದೀರಿ ಎಂದು ಮನೀಶ್ ಮೌದ್ಗಿಲ್ ಅವರಿಗೆ ಸಾ.ರಾ.ಮಹೇಶ್ ಪ್ರಶ್ನೆ ಮಾಡಿದರು.

ನಿಮ್ಮ ಶಿಷ್ಯೆನೋ, ಜ್ಯೂನಿಯರ್ ಇದ್ದಾರಲ್ಲ ಅವರು ಆಸ್ತಿ ಘೋಷಣೆ ಮಾಡಿದ್ದಾರಾ ಮನೀಷ್ ಮುದ್ಗಲ್ ಅವರೇ? ನನ್ನನ್ನು ಬ್ಲಾಕ್ ಮೇಲ್ ಮಾಡಿ ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಕಿಕ್ ಬ್ಯಾಗ್ ಪಡೆದಿಲ್ಲ. ನನ್ನ ವಿರುದ್ಧ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.