ಬೆಂಗಳೂರಿನಲ್ಲಿ ಮೂರು ದಿನ ಮಾತ್ರ ಗಣೇಶ ಹಬ್ಬ ಆಚರಣೆಗೆ ಅವಕಾಶ : ಬಿಬಿಎಂಪಿ ಆದೇಶ…

77
firstsuddi

ಬೆಂಗಳೂರು : ರಾಜ್ಯ ಸರ್ಕಾರ ಮೊನ್ನೆಯಷ್ಟೇ ಕನಿಷ್ಟ ಐದು ದಿನಗಳ ಗಣೇಶೋತ್ಸವಕ್ಕೆ ಅವಕಾಶ ನೀಡಿತ್ತು. ಆದರೆ, ಬಿಬಿಎಂಪಿ ಕೇವಲ ಮೂರು ದಿನ ಮಾತ್ರ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಿದೆ.

ಮಾರ್ಗಸೂಚಿಗಳು ಇಂತಿವೆ :
• ಬೆಂಗಳೂರು ನಗರದಲ್ಲಿ 3 ದಿನಗಳ ಕಾಲ ಗಣೇಶ ಹಬ್ಬ ಆಚರಿಸಲು ಅನುಮತಿ
• 198 ವಾರ್ಡ್ ಗಳಲ್ಲಿ ಒಂದು ಸಾರ್ವಜನಿಕ ಗಣೇಶ ಮೂರ್ತಿಗೆ ಅವಕಾಶ. ಆದರೆ, ಸ್ಥಳ ಪಾಲಿಕೆ ನಿಗದಿ ಮಾಡುತ್ತದೆ.
• ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರ, ಮನೆಯಲ್ಲಿ 2 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ.
• ಮೂರ್ತಿ ಪ್ರತಿಷ್ಠಾಪನೆ ಜಾಗದಲ್ಲಿ 20 ಮಂದಿಗೆ ಮಾತ್ರ ಅವಕಾಶ. ಇಲ್ಲಿ ಹೋಂಗಾರ್ಡ್ ಹಾಗೂ ಮಾರ್ಷಲ್ಸ್ ಉಸ್ತುವಾರಿ ಇರುತ್ತದೆ. ಸಾರ್ವಜನಿಕರು ನಿಯಮ ತಪ್ಪಿದರೆ ದಂಡ ವಿಧಿಸಲಾಗುವುದು.
• ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ಮನರಂಜನೆ, ಸಾಂಸ್ಕೃತಿಕ, ಡಿಜೆ, ಡ್ಯಾನ್ಸ್ಗೆ ಅವಕಾಶ ಇಲ್ಲ
• ಟ್ರಾಫಿಕ್ ಸಮಸ್ಯೆ ಆಗದಂತೆ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಇದಕ್ಕೆ ಆಯಾ ವಾರ್ಡ್ ವ್ಯಾಪ್ತಿಯ ಸಂಚಾರಿ ಪೊಲೀಸರ ಉಸ್ತುವಾರಿ ಇರಲಿದೆ.
• ಗಣೇಶ ಮೂರ್ತಿ ಕೂರಿಸುವ ಆಯೋಜಕರು 2 ಡೋಸ್ ಕೊರೊನಾ ಲಸಿಕೆಯನ್ನು ಪಡೆದಿರಬೇಕು.
• ಪಿಒಪಿ ಮೂರ್ತಿಗಳಿಗೆ ಅವಕಾಶ ಇಲ್ಲ. ಇದನ್ನು ಬಳಸಿದರೆ ದಂಡ ಹಾಗೂ ಕಠಿಣ ಶಿಕ್ಷೆ.
• ಮೂರ್ತಿ ಪ್ರತಿಷ್ಠಾಪನೆ ಮಾಡುವ ಜಾಗದಲ್ಲಿ ಕಡ್ಡಾಯವಾಗಿ ಆಗಾಗ ಸ್ಯಾನಿಟೈಸ್ ಮಾಡುವುದು, ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ 6 ಅಡಿ ಸಾಮಾಜಿಕ ಅಂತರ ಪಾಲನೆ ಮಾಡುವುದು
• ಮೂರ್ತಿ ವಿಸರ್ಜನೆಗೆ ಪಾಲಿಕೆಯಿಂದಲೇ ಮೊಬೈಲ್ ಟ್ಯಾಂಕರ್ ಇರಲಿದೆ. ಇದರ ಹೊರತಾಗಿ ನಗರದ ಯಾವುದೇ ಕೆರೆ ಹಳ್ಳ ಕೊಳ್ಳದಲ್ಲಿ ಮೂರ್ತಿ ವಿಸರ್ಜನೆ ಮಾಡಬಾರದು.
• ನಿಯಮ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005 & IPಅ 188 ಅಡಿಯಲ್ಲಿ ಕ್ರಮ ಜರುಗಿಸುವಂತೆ ಮುಖ್ಯ ಆಯುಕ್ತರು ಜಂಟಿ ಆಯುಕ್ತರಿಗೆ ಸುತ್ತೋಲೆ ಹೊರಡಿಸಿದ್ದಾರೆ.