ಪೆಟ್ರೋಲ್ ಸುರಿದು ಪತಿಯನ್ನ ಕೊಂದು ಶವವನ್ನ ಚರಂಡಿಗೆ ಎಸೆದ ಪತ್ನಿ!

103
firstsuddi

ತುಮಕೂರು : ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದು ಪತ್ನಿಯೇ ಶವವನ್ನ ಚರಂಡಿಗೆ ಎಸೆದಿರುವ ಘಟನೆ ನಗರದ ಬಡ್ಡಿಹಳ್ಳಿಯಲ್ಲಿ ನಡೆದಿದೆ. ಮೃತನನ್ನು ನಾರಾಯಣ್(52) ಎಂದು ಗುರುತಿಸಲಾಗಿದ್ದು, ಅನ್ನಪೂರ್ಣ ಪತಿಯನ್ನ ಹತ್ಯೆಗೈದ ನಾರಾಯಣ್ ಪತ್ನಿ ಎಂದು ತಿಳಿದುಬಂದಿದೆ.

ಮೃತ ನಾರಾಯಣ ನೆಲಮಂಗಲ ಬಳಿಯ ಟೋಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅನ್ನಪೂರ್ಣಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದ್ದು, ಕಳೆದ 8 ವರ್ಷಗಳಿಂದ ಪ್ರ ಮನೆಯಲ್ಲಿ ಪ್ರತಿನಿತ್ಯ ಜಗಳವಾಗುತ್ತಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬ ಆರೋಪ ಬಂದಿದೆ.

ತುಮಕೂರು ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನ್ನಪೂರ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.