ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ!

78
firstsuddi

ಹಾಸನ : ಕತ್ತು ಸೀಳಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಜಲೇಂದ್ರ (31) ಹತ್ಯೆಯಾದ ವ್ಯಕ್ತಿ. ಜಲೇಂದ್ರ ಜೆಸಿಬಿ ಆಪರೇಟರ್ ಆಗಿದ್ದರು. ನಿನ್ನೆ ರಾತ್ರಿ ಮನೆಯಿಂದ ಹೊರಗೆ ಹೋಗಿದ್ದವನು ವಾಪಸ್ ಬಂದಿರಲಿಲ್ಲ.

ಇಂದು ಬೆಳಗ್ಗೆ ಜಲೇಂದ್ರ ಸಹೋದರ ಡೈರಿಗೆ ಹಾಲು ಹಾಕಿ ಜಮೀನಿನ ಬಳಿ ಹೋದಾಗ ಹೊಲದ ಬಳಿ ಜಲೇಂದ್ರ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲಿ ಬಿಯರ್ ಬಾಟಲ್ ಗಳು ಬಿದ್ದಿದ್ದು, ಯಾರೋ ಮೊದಲು ಎಣ್ಣೆ ಪಾರ್ಟಿ ಮಾಡಿ, ಆ ನಂತರ ಜಲೇಂದ್ರನ ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.