ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಸಮ ಸಮಾಜದ ನಿರ್ಮಾಣ ಸಾಧ್ಯ : ಕೆ.ಟಿ.ರಾಧಾಕೃಷ್ಣ.

123
firstsuddi

ಚಿಕ್ಕಮಗಳೂರು : ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ವಿಚಾರ ದಾರೆ ಮತ್ತು ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡರೆ ಸಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಬಿಎಸ್ ಪಿ ಜಿಲ್ಲಾದ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು

ನಗರದ ಬಿ ಎಎಸ್ ಪಿ ಕಚೇರಿಯಲ್ಲಿ ಇಂದು ನಡೆದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ 142 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ಅಸ್ಪೃಶ್ಯತೆ. ಅಸಮಾನತೆ. ಜಾತಿ ಪದ್ದತಿ .ಲಿಂಗ ತಾರತಮ್ಯ ಸೇರಿದಂತೆ ಸಮಾಜದಲ್ಲಿದ್ದ ಪಿಡುಗುಗಳು ದೌರ್ಜನ್ಯ. ಶೋಷಣೆಗಳ ವಿರುದ್ಧ ಹೋರಾಟ ನಡೆಸಿದ ಮಹಾತ್ಮರು ಎಂದರು

ಅಂತಹ ಮಾನವತಾವಾದಿಯ ವಿಚಾರಧಾರೆಗಳನ್ನು ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡರೆ ಸಮಾಜದಲ್ಲಿರುವ ಅಸ್ಪೃಶ್ಯತೆ. ಅಸಮಾನತೆ. ದೌರ್ಜನ್ಯ ಶೋಷಣೆಗಳು ನಿಲ್ಲುತ್ತವೆ ಎಂದು ತಿಳಿಸಿದರು

ಸಹೋದರತ್ವ ಸಮಿತಿಯ ಜಿಲ್ಲಾಧ್ಯಕ್ಷೆ ಕೆ.ಬಿ.ಸುದಾ ಮಾತನಾಡಿ ಸಮಾಜ ಸುಧಾರಕ ಪೆರಿಯಾರ್ ಅವರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯಗಳು ಎಂದರು.

ಜಯಂತಿ ಪ್ರಯುಕ್ತ ಪೆರಿಯಾರ್ ಅವರ ಬಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಲಾಯಿತು.ಉಪನ್ಯಾಸಕ ಎ.ಪಿ.ಸುರೇಶ್.ಸಂದೀಪ್.ತಾಲ್ಲೂಕು ಪ್ರದಾನ ಕಾರ್ಯದರ್ಶಿ ವಸಂತ.ನವೀನ್.ಹುಣಸೇಮಕ್ಕಿ ಲಕ್ಮಣ್.ಕೆ.ಎಸ್.ಮಂಜುಳ.ರವಿಕುಮಾರ್ ಉಪಸ್ಥಿತರಿದ್ದರು.