ಮೆಟ್ರೋ ಕಾಮಗಾರಿ ವೇಳೆ ಮಣ್ಣು ಕುಸಿತ – ತಪ್ಪಿದ ಭಾರೀ ಅನಾಹುತ…

60
firstsuddi

ಬೆಂಗಳೂರು : ಮೆಟ್ರೋ ಕಾಮಗಾರಿ ವೇಳೆ 30 ಅಡಿ ಮಣ್ಣು ಕುಸಿದು ಸಂಭವಿಸಬೇಕಿದ್ದ ಭಾರೀ ಅನಾಹುತ ತಪ್ಪಿರುವ ಘಟನೆ ನಗರದ ಟ್ಯಾನರಿ ರಸ್ತೆಯಲ್ಲಿ ನಡೆದಿದೆ.

ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಸುರಂಗ ಕೊರೆದು ಟಿಬಿಎಂ ಹೊರಗೆ ಬಂದಿತ್ತು. ಮುಂಜಾನೆ 3 ಗಂಟೆಗೆ ಮುಚ್ಚಿದ್ದ ಬಾವಿಗೆ ಮಣ್ಣು ಕುಸಿದು ಕೆಳಗೆ ಬಿದ್ದಿದೆ.

ಮಾಲೀಕ ಝಬೀ ಎಂಬವರಿಗೆ ಸೇರಿದ ಜಾಗ ಇದಾಗಿದ್ದು, ಮಣ್ಣು ಕುಸಿಯಲು ಬಿಎಂಆರ್​ಸಿಎಲ್ ಅಧಿಕಾರಿಗಳೇ ಕಾರಣ. ಹೀಗಾಗಿ ಇದಕ್ಕೆ ಪರಿಹಾರ ನೀಡಲಿ ಎಂದು ಆಗ್ರಹಿಸಿದ್ದಾರೆ.