ಯುವಕನ ಬರ್ಬರ ಹತ್ಯೆ.. ಅನ್ಯ ಕೋಮಿನ ಯುವತಿನ್ನ ಪ್ರೀತಿಸಿದ್ದಕ್ಕೆ ನಡೀತಾ ಕೊಲೆ?

71
firstsuddi

ಬೆಳಗಾವಿ : ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಖಾನಾಪುರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಅರ್ಬಾಜ್ ಮುಲ್ಲಾ (24) ಕೊಲೆಯಾದ ಯುವಕ. ಸೆ. 28ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಅರ್ಬಾಜ್ ನನ್ನು ಕೊಲೆ ಮಾಡಿ ಖಾನಾಪುರ ಹೊರವಲಯದ ರೈಲ್ವೆ ಹಳಿ ಮೇಲೆ ಬಿಸಾಡಿ ಪರಾರಿಯಾಗಿದ್ದಾರೆ.

ಅರ್ಬಾಜ್ ಮುಲ್ಲಾ ಯುವತಿಯ ಮನೆಯವರ ವಿರೋಧದ ನಡುವೆ ಆಕೆಯನ್ನು ಪ್ರೀತಿಸುತ್ತಿದ್ದ. ಯುವತಿ ಕುಟುಂಬಸ್ಥರು ಅರ್ಬಾಜ್ ಗೆ ಹಲವು ಬಾರಿ ವಾರ್ನ್ ಮಾಡಿದ್ದರಂತೆ. ಆದರೂ ಅರ್ಬಾಜ್ ಮದುವೆಯಾಗಲು ಸಿದ್ಧತೆ ನಡೆಸಿದ್ದ. ಹೀಗಾಗಿ ಯುವಕ ಕೊಲೆಯಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾನಾಪುರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.