ಚಾಮರಾಜನಗರ : ಮೀನು ಹಿಡಿಯಲು ಹೋದ ವೇಳೆ ದೋಣಿ ಮಗುಚಿ ಯುವಕ ಸಾವು…

78
firstsuddi

ಚಾಮರಾಜನಗರ : ಮೀನು ಹಿಡಿಯಲು ಹೋದ ವೇಳೆ ದೋಣಿ ಮಗುಚಿ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿವನಸಮುದ್ರ ಗ್ರಾಮದ ನಿವಾಸಿ ವರುಣ್ ಮೃತ ಯುವಕ.

ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರ ಬಳಿ ಮೀನು ಹಿಡಿಯಲು ವರುಣ್ ಹಾಗೂ ರವಿ ಹೋಗಿದ್ದರು. ಈ ವೇಳೆ ದೋಣಿ ಮಗುಚಿದ ಪರಿಣಾಮ ವರುಣ್ ಸಾವನ್ನಪ್ಪಿದ್ದು, ರವಿ ಈಜಿ ದಡ ಸೇರಿದ್ದಾನೆ. ಸದ್ಯ ಮೃತ ಯುವಕನ ಶೋಧ ಕಾರ್ಯ ನಡೆದಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.